ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ

Cow Shelter
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಚಾರು ಗ್ರಾಮದ ಅಂಬಾರಮಕ್ಕಿ ನಿವಾಸಿ ಹೈನುಗಾರ ಗಣಪತಿ ಅವರ ಮೇಯಲು ಬಿಟ್ಟ ಆರು ಹಸುಗಳ ಪೈಕಿ ಕಳೆದ ಒಂದು ವಾರದಿಂದ ಐದು ಹಸುಗಳು ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ.

ದಿನಂಪ್ರತಿ ಈ ಹಸುಗಳನ್ನು ಹತ್ತಿರದ ಹುಲ್ಲುಗಳಿರುವ ಜಾಗಗಳಲ್ಲಿ ಮೇಯಲು ಬಿಡುತ್ತಿದ್ದು, ವಿಷ ಪ್ರಾಶನದಿಂದ ಸಾವು ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಂತೆಕಟ್ಟೆ ಪಶುವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ ಭೇಟಿ ನೀಡಿ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಯನ್ನು ಮಂಗಳೂರು ಲ್ಯಾಬ್‌ಗೆ ರವಾನಿಸಿದ್ದಾರೆ. ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿಯಬಹುದು ಎಂದು ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಗಣಪತಿ ನಾಯ್ಕ ಕುಟುಂಬಕ್ಕೆ ಹೈನುಗಾರಿಕೆಯೇ ಮೂಲವಾಗಿತ್ತು. ಪ್ರತಿದಿನ 25 ಲೀಟರ್ ಹಾಲು ನೀಡುತ್ತಿದ್ದು, ಹಸುಗಳ ಮರಣದಿಂದಾಗಿ ನಷ್ಟವಾಗಿದೆ. ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಸಂಘದಿಂದ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net