ರಕ್ಷಣಾ ಪಡೆಗೆ ಸಹಕಾರ ನೀಡಲು ಮೀನುಗಾರರು ಬದ್ಧ...

Yashpal
Published on

 ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಪರೇಷನ್​ ಸಿಂಧೂರ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ದೇಶದ ಕರಾವಳಿ ಜಿಲ್ಲೆಯ ಕಡಲ ತೀರ ಹಾಗೂ ಸಮುದ್ರ ಭಾಗದಲ್ಲಿ ನಿಗಾ ವಹಿಸಲು ರಕ್ಷಣಾ ಪಡೆಗಳಿಗೆ ಸಂಪೂರ್ಣ ಸಹಕಾರ ನೀಡಲು ಜಿಲ್ಲೆಯ ಮೀನುಗಾರರು ಸದಾ ಬದ್ಧರಿದ್ದಾರೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್​ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.

ಕರ್ನಾಟಕ ಕರಾವಳಿಯ 330 ಕಿಮೀ ವ್ಯಾಪ್ತಿಯ ಸಮುದ್ರ ತೀರ ಹಾಗೂ ಮೀನುಗಾರಿಕಾ ಸಂದರ್ಭದಲ್ಲಿ ಅನ್ಯ ರಾಜ್ಯ ಅಥವಾ ದೇಶಗಳ ಬೋಟ್​, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಲು ಈಗಾಗಲೇ ಮೀನುಗಾರರಿಗೆ ಮಾಹಿತಿ ನೀಡಲಾಗಿದೆ.

ಮೀನುಗಾರರು ಕಡಲ ಸೈನಿಕರಂತೆಯೇ ಇದ್ದು, ದೇಶದ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ಬದ್ಧವಾಗಿದ್ದಾರೆ. ಈಗಾಗಲೇ ಎಲ್ಲ ಬಂದರುಗಳ ಮೀನುಗಾರರ ಸಂಘದ ಮುಖಂಡರು ಮೀನುಗಾರರಿಗೆ ಅಗತ್ಯ ಮಾಹಿತಿ, ಸೂಚನೆ ನೀಡಿದ್ದಾರೆ ಎಂದು ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net