

ಕುಂದಾಪುರ: ಬೀಜಾಡಿ ಗ್ರಾಮದ ಚಾತ್ರಬೆಟ್ಟುವಿನ ಸಮುದ್ರದಲ್ಲಿ ಬುಧವಾರ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ರಭಸದ ಅಲೆಗೆ ಸಿಲುಕಿ ಸಂಜೀವ ಎಂಬುವರು ಮೃತಪಟ್ಟಿದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಜೋರಾದ ಅಲೆ ಬಂದಿದ್ದು, ಈ ಸಂದರ್ಭ ದೋಣಿ ಪಲ್ಟಿಯಾಗಿದೆ. ನೀರಿಗೆ ಬಿದ್ದ ಸಂಜೀವರನ್ನು ಜತೆಗಿದ್ದವರು ರಕ್ಷಿಸಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.