'ವಿಜಯಾನಂದ' ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗಿ

Vijayananda 1
Published on

ಬೆಂಗಳೂರು: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ 'ವಿಜಯಾನಂದ' ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗುತ್ತಿದೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ.

ಇಂದು ಒರಾಯನ್​ ಮಾಲ್​ನ ಲೇಕ್ ವ್ಯೂನಲ್ಲಿ ಒಂದು ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಡಾ. ವಿಜಯ ಸಂಕೇಶ್ವರ, ಶರಣ್​, ಹರ್ಷಿಕಾ ಪೂಣಾಚ್ಛ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.

ಸಾವಿರಾರು ಜನ ಭಾಗವಹಿಸಿರುವ ಈ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಗೋಪಿಸುಂದರ್​ ಅವರ ಸಂಗೀತ ಕಾರ್ಯಕ್ರಮವೂ ಎಲ್ಲರ ಗಮನಸೆಳೆದಿದೆ.

ವಿಆರ್​ಎಲ್​ ಪ್ರೊಡಕ್ಷನ್ಸ್​ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿರುವ "ವಿಜಯಾನಂದ' ಚಿತ್ರದಲ್ಲಿ ನಿಹಾಲ್ ರಜಪೂತ್​​, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

ಈಗಾಗಲೇ 'ವಿಜಯಾನಂದ' ಚಿತ್ರದ ಟೀಸರ್​, ಡಾ. ವಿಜಯ ಸಂಕೇಶ್ವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟೀಸರ್​ಗಳು ಅತೀ ಹೆಚ್ಚು ವೀಕ್ಷಣೆ ಪಡೆಯುವುದರ ಜತೆಗೆ, ಸಾವಿರಾರು ಲೈಕ್ಸ್​ಗಳನ್ನು ದಾಖಲಿಸಿ ಪ್ರೇಕ್ಷಕರ ಪ್ರಶಂಸೆಗೆ ಭಾಜನವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net