ಟೇಕ್ವಾಂಡೋದಲ್ಲಿ ಚಾನಸ್ಯ ರಾಜ್ಯಮಟ್ಟಕ್ಕೆ

chanasya 1
ಚಾನಸ್ಯ ಕಟುವಾಲ್ ಛೇತ್ರಿ.
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಾನಸ್ಯ ಕಟುವಾಲ್ ಛೇತ್ರಿ, ತಲಪಾಡಿಯಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ವಿಭಾಗದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಲ್ಮಕಾರಿನ ಬಾಕಿಲ ಮನೆ ರೇಬತ್ ಕಟುವಾಲ್ ಛೇತ್ರಿ ಮತ್ತು ವಿದ್ಯಾಗೌಡ ದಂಪತಿಗಳ ಪುತ್ರಿ. ತಂದೆ ರೇಬತ್ ಕಟುವಾಲ್ ಛೇತ್ರಿ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net