ಸಂಸತ್ತಿನಲ್ಲಿ ಮಗುವಿಗೆ ಹಾಲುಣಿಸಿದ ಮಹಿಳಾ ಸಂಸದೆ!

First MP To Breastfeed Baby In Italys Parliament
Published on

ಇಟಲಿ: ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೊ ಅವರು ಇಟಲಿಯ ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿದ ಮೊದಲ ರಾಜಕಾರಣಿಯಾಗಿದ್ದಾರೆ.

ಅಪರೂಪದ ದೃಶ್ಯ ಇಟಲಿ ಸಂಸತ್ತಿನಲ್ಲಿ ನಡೆದಿದೆ. ಮಹಿಳಾ ಸಂಸದೆ ಗಿಲ್ಡಾ ಸ್ಪೋರ್ಟಿಲೊ ಇಟಲಿ ಸಂಸತ್ತಿನ ಸಭಾಂಗಣದಲ್ಲಿ ತಮ್ಮ ಮಗುಗೆ ಹಾಲುಣಿಸಿದರು. ಸದಸ್ಯರು ಕುಳಿತಿದ್ದ ಬೆಂಚಿನ ಬಳಿ ಮಗನನ್ನು ಎತ್ತಿಕೊಂಡು ಹಾಲು ಕುಡಿಸಿದ್ದಾರೆ. ಈ ಘಟನೆಗೆ ಸಂಸದರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಪುರುಷರ ಪ್ರಾಬಲ್ಯವಿರುವ ಇಟಲಿಯ ಕೆಳಮನೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಗಮನಾರ್ಹ ವಿಷಯವಾಗಿದೆ.

ಕಳೆದ ನವೆಂಬರ್‌ನಲ್ಲಿ, ಸಂಸದೀಯ ನಿಯಮಗಳ ಸಮಿತಿಯು ಮಹಿಳಾ ಶಾಸಕರು ತಮ್ಮ ಮಕ್ಕಳನ್ನು ಇಟಲಿಯು ಸಂಸತ್ತಿಗೆ ಕರೆತರಲು ಅವಕಾಶ ನೀಡುವ ಕಾನೂನನ್ನು ಅಂಗೀಕರಿಸಿತು. ಮಕ್ಕಳಿಗೆ ಒಂದು ವರ್ಷ ತುಂಬುವವರೆಗೆ ಸಂಸತ್ತಿನಲ್ಲಿ ಎದೆಹಾಲು ಕುಡಿಸಬಹುದು ಎಂದು ನಿರ್ಧರಿಸಲಾಯಿತು. ಹಲವು ಮಹಿಳೆಯರು ಸ್ತನ್ಯಪಾನವನ್ನು ಸಮಯಕ್ಕಿಂತ ಮುಂಚಿತವಾಗಿ ನಿಲ್ಲಿಸುತ್ತಾರೆ, ಆಯ್ಕೆಯಿಂದ ಅಲ್ಲ, ಬದಲಿಗೆ ಅವರು ಕೆಲಸದ ಸ್ಥಳಕ್ಕೆ ಮರಳಲು ಹೀಗೆ ಮಾಡಬೇಕಾಗುತ್ತದೆ.

ಸ್ತನ್ಯಪಾನವನ್ನು ಅನುಮತಿಸುವ ಹೊಸ ನಿಯಮವು ಅಕ್ಟೋಬರ್ 2019 ರಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದ ಜಾರ್ಜಿಯಾ ಮೆಲೋನಿ ಅವರು ಮಂಡಿಸಿದ ಪ್ರಸ್ತಾಪದ ನಂತರ ಜಾರಿಗೆ ಬಂದಿತು. ಅದೇ ವರ್ಷದ ನವೆಂಬರ್‌ನಲ್ಲಿ, ಶುಶ್ರೂಷಾ ತಾಯಂದಿರಿಗೆ ಮೀಸಲಾಗಿರುವ ಸಂಸತ್ತಿನ ಕಟ್ಟಡಗಳಲ್ಲಿ ವಿಶೇಷ ಸ್ತನ್ಯಪಾನ ಕೊಠಡಿಯನ್ನು ಉದ್ಘಾಟಿಸಲಾಯಿತು.

ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿರುವ ಸುದ್ದಿ ಇಟಲಿಗೆ ಮೊದಲನೆಯದಾಗಿದ್ದರೆ, 13 ವರ್ಷಗಳ ಹಿಂದೆ ಸೆಂಟರ್-ರೈಟ್ ಫೋರ್ಜಾ ಇಟಾಲಿಯಾ ಪಕ್ಷದ ಸೆನೆಟರ್ ಆಗಿರುವ ಲಿಸಿಯಾ ರೊನ್‌ಜುಲ್ಲಿ, ಸ್ಟ್ರಾಸ್‌ಬರ್ಗ್‌ನ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ತನ್ನ ಮಗಳಿಗೆ ಹಾಲುಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net