More

    ಬಿಡುಗಡೆಯಾಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಚಿತ್ರದ ಫಸ್ಟ್​ ಲುಕ್​ …

    ಬೆಂಗಳೂರು: ವಿಜಯ್​ ರಾಘವೇಂದ್ರ ಅವರು ಇತ್ತೀಚಿನ ವರ್ಷಗಳಲ್ಲಿ ಹೊಸಹೊಸ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ಮಾಲ್ಗುಡಿ ಡೇಸ್​’ ಚಿತ್ರದಲ್ಲಿ ಹಿರಿಯ ಲೇಖಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅವರು. ಇದೀಗ ಅವರ 50ನೇ ಚಿತ್ರದಲ್ಲಿ ಮೊದಲ ಬಾರಿಗೆ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಿಡುಗಡೆಯಾಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಚಿತ್ರದ ಫಸ್ಟ್​ ಲುಕ್​ ...

    ಇದನ್ನೂ ಓದಿ: ಕನ್ನಡ ಜನತೆಗೆ ಈ ಸಿನಿಮಾಗಳಿಂದ ವಿಜಯದಶಮಿಯ ಶುಭಾಶಯಗಳು …

    ವಿಜಯ್​ ರಾಘವೇಂದ್ರ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ, ಸದ್ದಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಈ ಚಿತ್ರದ ಟೈಟಲ್​ ಹೇಳುವುದರ ಜತೆಗೆ, ಫಸ್ಟ್​ ಲುಕ್​ ಸಹ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.

    ಅದರಂತೆ ಇಂದು ಚಿತ್ರದ ಮೊದಲ ಲುಕ್​ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಸೀತಾರಾಮ್​ ಬಿನೋಯ್​ – ಕೇಸ್​ ನಂಬ 18’ ಎಂಬ ಹೆಸರಿಡಲಾಗಿದ್ದು, ವಿಜಯ್​ ರಾಘವೇಂದ್ರ ಈ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೆಸರೇ ಹೇಳುವಂತೆ, ಇದೊಂದು ತನಿಖೆಯಾಧಾರಿತ ಚಿತ್ರವಾಗಿದ್ದು, ಕೇಸ್​ ನಂ 18 ಸುತ್ತ ಸುತ್ತುತ್ತದೆ. ಆ ಕೇಸ್​ ನಂ 18 ಏನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

    ಇದನ್ನೂ ಓದಿ: ‘ದುನಿಯಾ’ ವಿಜಯ್​ ನಿರ್ದೇಶನದ ಚಿತ್ರಕ್ಕೆ ಡಾ. ರಾಜ್ ಕುಟುಂಬದ ಕುಡಿ ನಾಯಕ …

    ಅಂದಹಾಗೆ, ‘ಸೀತಾರಾಮ್​ ಬಿನೋಯ್​’ ಚಿತ್ರವನ್ನು ದೇವಿ ಪ್ರಸಾದ್​ ಶೆಟ್ಟಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆ-ಚಿತ್ರಕಥೆ ಸಹ ಅವರದ್ದೇ. ಬರೀ ನಿರ್ದೇಶನವಷ್ಟೇ ಅಲ್ಲ, ಸಾತ್ವಿಕ್​ ಹೆಬ್ಬಾರ್​ ಮತ್ತು ಎಂಆರ್​ಪಿ ಜತೆಗೆ ಸೇರಿಕೊಂಡು ಈ ಚಿತ್ರವನ್ನು ಅವರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗಗನ್​ ಬಡೇರಿಯ ಅವರ ಸಂಗೀತವಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟೀಸರ್​ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ‘ಕೆಜಿಎಫ್​ 2’ ಚಿತ್ರದಲ್ಲಿ ರವೀನಾ ಟಂಡನ್​ ಹೀಗೆ ಕಾಣ್ತಾರೆ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts