ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮೊದಲ ಬಾರಿ ಮಹಿಳೆಗೆ ಮಣೆ

pcb web
Published on

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕರನ್ನು ನೇಮಿಸಿದೆ. ಮಾನವ ಸಂಪನ್ಮೂಲ ಕಾರ್ಯನಿರ್ವಹಣಾಧಿಕಾರಿ ಆಲಿಯಾ ಜಫರ್ ಅವರು ಇದೀಗ ಪಿಸಿಬಿಯ ನಾಲ್ವರು ನಿರ್ದೇಶಕರ ಪೈಕಿ ಒಬ್ಬರಾಗಿದ್ದಾರೆ.

ಆಲಿಯಾ ಜಫರ್ ಅವರನ್ನು 2 ವರ್ಷಗಳ ಅವಧಿಗೆ ನೇಮಿಸಲಾಗಿದೆ. ವಿತ್ತ ಕಾರ್ಯನಿರ್ವಹಣಾಧಿಕಾರಿ ಜಾವೆದ್ ಕುರೈಶಿ, ಆರ್ಥಿಕ ತಜ್ಞ ಆಸಿಮ್ ವಜಿದ್ ಜಾವದ್ ಮತ್ತು ಕಾರ್ಪೋರೇಟ್ ಕಾರ್ಯನಿರ್ವಹಣಾಧಿಕಾರಿ ಆರಿಪ್ ಸಯೀದ್ ಪಿಸಿಬಿಯ ಇತರ ಮೂವರು ನಿರ್ದೇಶಕರಾಗಿದ್ದಾರೆ.

ಪಿಸಿಬಿಯ ಹೊಸ ಸಂವಿಧಾನದ ಅನ್ವಯ ಆಡಳಿತ ಮಂಡಳಿಯ ನಾಲ್ವರು ಸ್ವತಂತ್ರ ನಿರ್ದೇಶಕರ ಪೈಕಿ ಒಬ್ಬರು ಮಹಿಳೆ ಇರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಆಲಿಯಾ ಜಫರ್ ಅವರಿಗೆ ಮಣೆ ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net