ಮಕ್ಕಳಿಗೆ ಪ್ರತಿದಿನವೂ ಆಟಕ್ಕೆ ಸಮಯ ನೀಡಿ...

Games Day 1
Published on

ಪಾಲಕರಿಗೆ ಕುಸುಮಾಕರ ಶೆಟ್ಟಿ ಸಲಹೆ

ಅಂತಾರಾಷ್ಟ್ರೀಯ ಆಟದ ದಿನದ ವಾರ್ಷಿಕ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಸ್ಥ್ಯ ಕಾಪಾಡಿಕೊಳ್ಳಲು ಆಟ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧ ಆಟಗಳಲ್ಲಿ ತೊಡಗಿದರೆ ಅವರು ಸದೃಢರಾಗುತ್ತಾರೆ. ಚೆನ್ನಾಗಿ ಪರಿಣತಿ ಹೊಂದಿದರೆ ಆಟವನ್ನೂ ಸಹ ವೃತ್ತಿಯಾಗಿ ಮುಂದುವರಿಸಲು ಹೇರಳ ಅವಕಾಶವಿದೆ. ಹೀಗಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾಗಿರುವ ಆಟಕ್ಕೆ ಪಾಲಕರು ಹೆಚ್ಚಿನ ಆದ್ಯತೆ, ಸಮಯ ನೀಡಬೇಕು ಎಂದು ಕುಂದಾಪುರ ತಾಲೂಕು ಕ್ರೀಡಾ ಇಲಾಖಾ ಅಧಿಕಾರಿ ಕುಸುಮಾಕರ ಶೆಟ್ಟಿ ಸಲಹೆ ನೀಡಿದರು.

Games Day 2
ಕುಂದಾಪುರ ತಾಲೂಕಿನ ಕನ್ಯಾನದಲ್ಲಿರುವ ನಮ್ಮ ಭೂಮಿಯಲ್ಲಿ ದಿ ಕನ್ಸರ್ನ್ಡ್​ ಫಾರ್​ ವರ್ಕಿಂಗ್​ ಚಿಲ್ಡ್ರನ್ಸ್, ವಿಜಯನಗರ ಮತ್ತು ಉಡುಪಿ ಜಿಲ್ಲೆಯ ಭೀಮ ಸಂಘ, ಮಕ್ಕಳ ಸಂಘಗಳ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಆಟದ ದಿನಾಚರಣೆ ನಿಮಿತ್ತ ಜೂನ್​ 11ರಂದು ಆಯೋಜಿಸಿದ್ದ ಆಟ ನಮ್ಮ ಹಕ್ಕು; ಜತೆಯಾಗಿ ಆಡೋಣ-ಜತೆಯಾಗಿ ಬಾಳೋಣ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಟಗಳಿಂದ ಆತ್ಮ ವಿಶ್ವಾಸ

Games Day 3
ಕ್ರೀಡಾ ಹಬ್ಬ ಉದ್ಘಾಟಿಸಿದ ಕಂಡ್ಲೂರು ಪೊಲೀಸ್​ ಠಾಣೆಯ ನಿರೀಕ್ಷಕ ಈರಣ್ಣ ಶಿರಗುಂಪಿ ಮಾತನಾಡಿ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಆಟ ಅತ್ಯಂತ ಅವಶ್ಯಕ. ಆಟಗಳಿಂದ ಭಾವನಾತ್ಮಕ, ಸಾಮಾಜಿಕ, ಬೌದ್ಧಿಕ ಮತ್ತು ದೈಹಿಕವಾಗಿಯೂ ಅವರು ಬೆಳೆಯುತ್ತಾರೆ. ಅಲ್ಲದೆ, ಮಕ್ಕಳಲ್ಲಿ ಸೃಜನಶೀಲತೆ, ಸಹನೆ, ಸಹಕಾರ ಮತ್ತು ಆತ್ಮವಿಶ್ವಾಸ ಬೆಳೆಸುತ್ತದೆ ಎಂದರು.

ಸಂಸ್ಥೆಯ ಉಪ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಕಾರ್ಯಕ್ರಮದ ನಿರ್ದೇಶಕ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತಮಾಡಿದರು. ಕ್ಷೇತ್ರ ಕಾರ್ಯಕ್ರಮದ ಸಹ ನಿರ್ದೇಶಕಿ ಕೃಪಾ ಎಂ.ಎಂ. ವಂದಿಸಿದರು. ಸಂಸ್ಥೆಯ ಪಂಚಾಯಿತಿ ಮಟ್ಟದ ಸೌಕರ್ಯಕಾರ ಗಣೇಶ ಶೆಟ್ಟಿ ನಿರೂಪಿಸಿದರು.

ಮೋಜಿನಾಟ, ಸಂಭ್ರಮಿಸಿದ ಚಿಣ್ಣರು

Games Day Box
Games Day 5
ಕ್ರೀಡಾ ಜ್ಯೋತಿಯೊಂದಿಗೆ ಆಟದ ಮಹತ್ವ, ಹಕ್ಕುಗಳ ಘೋಷಣೆಯೊಂದಿಗೆ ನೂರಾರು ಮಕ್ಕಳು ಮೆರವಣಿಗೆಯಲ್ಲಿ ಆಗಮಿಸಿದರು. ಶ್ರೀ ಸಿದ್ಧಿವಿನಾಯಕ ಶಾಲೆ ಹಟ್ಟಿಯಂಗಡಿ ಮಕ್ಕಳೊಂದಿಗೆ ಸೇರಿ ವಾದ್ಯಮೇಳಗಳೊಂದಿಗೆ ಸಾಗಿಬಂದರು. ಗಣ್ಯರು ಕ್ರೀಡಾಜ್ಯೋತಿ ಸ್ವೀಕರಿಸಿ ಶುಭ ಹಾರೈಸಿದರು. ಮಕ್ಕಳ ಮಿತ್ರರು, ಪಾಲಕರೂ ಸಹ ಸಂಭ್ರಮದಿಂದ ಮಕ್ಕಳಾಗಿ ಜತೆಯಾಗಿ ನಲಿದರು. ರಕ್ಷಣೆ, ಎಲ್ಲರ ಒಳಗೊಳ್ಳುವಿಕೆ, ಒಗ್ಗಟ್ಟಿನ ಮಹತ್ವ ಸಾರುವ ವಿವಿಧ ಆಟ, ಆ ಕುರಿತಾಗಿ ಮಕ್ಕಳೊಂದಿಗೆ ಚರ್ಚೆ ನಡೆಸಲಾಯಿತು. ವಿವಿಧ ಮೋಜಿನಾಟ, ಸಾಹಸಮಯ ಆಟ ಹಾಗೂ ಗ್ರಾಮೀಣ ಆಟಗಳಲ್ಲಿ ತೊಡಗಿಕೊಂಡ ಚಿಣ್ಣರು ಸಂಭ್ರಮಿಸಿದರು.

ವಿಶ್ವಸಂಸ್ಥೆಯು ಜೂ.11ಅನ್ನು ಅಂತಾರಾಷ್ಟ್ರೀಯ ಆಟದ ದಿನವೆಂದು ಕಳೆದ ವರ್ಷ ಘೋಷಿಸಿದೆ. ಅಂತಾರಾಷ್ಟ್ರೀಯ ಆಟದ ದಿನದ ವಾರ್ಷಿಕ ಸಂಭ್ರಮದ ನಿಮಿತ್ತ ಸಂಸ್ಥೆಯ ರಾಜ್ಯ ಸಂಪನ್ಮೂಲ ಕೇಂದ್ರವಾದ ನಮ್ಮ ಭೂಮಿಯಲ್ಲಿ ಮಕ್ಕಳಿಗಾಗಿ ವಿವಿಧ ಆಟ ಏರ್ಪಡಿಸಲಾಗಿದೆ. ವಿವಿಧ ಗ್ರಾಪಂಗಳ ಮಕ್ಕಳ ಸಂಘಗಳ ಪ್ರತಿನಿಧಿಗಳು, ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ಕಲಿಯುತ್ತಿರುವವರು ಸೇರಿ 140ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. | ಶ್ರೀನಿವಾಸ ಗಾಣಿಗ. ಕ್ಷೇತ್ರ ಕಾರ್ಯಕ್ರಮದ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net