ಇದು "ಕೇವಲ ಟ್ರೈಲರ್"! ನಟಿ ದಿಶಾ ಪಟಾನಿ ಮನೆಯ ಮೇಲೆ ಗುಂಡಿನ ದಾಳಿಗೆ ಎಚ್ಚರಿಕೆ ಕೊಟ್ಟ ಗೋಲ್ಡಿ ಬ್ರಾರ್ ಗ್ಯಾಂಗ್..Disha Patani

dishapatani
Published on

Disha Patani : ಬಾಲಿವುಡ್  ನಟಿ ದಿಶಾ ಪಟಾನಿ ಅವರ ಮನೆಯ ಮುಂದೆ ಶುಕ್ರವಾರ ಬೆಳಿಗ್ಗೆಯೇ ಗುಂಡಿನ ದಾಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಈ   ದಾಳಿಯ ಹೊಣೆ ಹೊತ್ತ ಗೋಲ್ಡಿ ಬ್ರಾರ್​ ಮತ್ತು ರೋಹಿತ್​ ಗೋದಾರ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ನಟಿ ಹಾಗೂ ಅವರ ಫ್ಯಾಮಿಲಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಗ್ಯಾಂಗ್‌ನ ಸದಸ್ಯ ವೀರೇಂದ್ರ ಚರಣ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, ದೇವತೆಗಳು ಮತ್ತು ಸನಾತನ ಧರ್ಮದ ಅವಮಾನವನ್ನು ಸಹಿಸಲಾಗುವುದಿಲ್ಲ, ಗುಂಡಿನ ದಾಳಿ "  ಇದು ಟ್ರೇಲರ್"  "ಮುಂದಿನ ಬಾರಿ, ಅವಳು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದರೆ, ನಾವು ಅವರನ್ನು ಅವರ ಮನೆಯಿಂದ ಜೀವಂತವಾಗಿ ಹೋಗಲು ಬಿಡುವುದಿಲ್ಲ" ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ ಎನ್ನಲಾಗಿದೆ.

"ಈ ಸಂದೇಶ ಅವರಿಗೆ ಮಾತ್ರವಲ್ಲ, ಎಲ್ಲಾ ಚಲನಚಿತ್ರ ಕಲಾವಿದರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಸಹ. ಭವಿಷ್ಯದಲ್ಲಿ ಯಾರಾದರೂ ನಮ್ಮ ಧರ್ಮ ಮತ್ತು ಸಂತರಿಗೆ ಸಂಬಂಧಿಸಿದಂತೆ ಅಂತಹ ಅಗೌರವದ ಕೃತ್ಯವನ್ನು ಮಾಡಿದರೆ, ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ನಮ್ಮ ಧರ್ಮವನ್ನು ರಕ್ಷಿಸಲು ನಾವು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದೇವೆ. ನಮಗೆ, ಧರ್ಮ ಮತ್ತು ಇಡೀ ಸಮಾಜ ಯಾವಾಗಲೂ ಒಂದೇ, ಮತ್ತು ಅವರನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ" ಎಂದು ಬರೆಯಲಾಗಿದೆ ಎನ್ನುವ ಮಾಹಿಯನ್ನು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ದಿನಗಳ ಹಿಂದೆ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಮಾಡಿದ ಹೇಳಿಕೆಗಳು ಒಂದು ಗುಂಪಿನ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಇದೇ ದಾಳಿಗೆ ಕಾರಣ ಎಂದು ಸ್ಥಳೀಯರು ಕೂಡ ನಂಬಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಅವರ ನಿವಾಸದಲ್ಲಿ ಈ ಸಂಭವಿಸಿದೆ. ಆದರೆ, ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಟಿಯ ತಂದೆ ಜಗದೀಶ್ ಪಟಾನಿ ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ ನಂತರ, ದಾಳಿಕೋರರನ್ನು ಬಂಧಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net