ಪುತ್ತೂರು ಗ್ರಾಮಾಂತರ: ಬೆಂಕಿ ಅವಘಡ ಸಂಭವಿಸಿ ದನದ ಹಟ್ಟಿ ಬೆಂಕಿಗಾಹುತಿಯಾದ ಘಟನೆ ಆರ್ಯಾಪು ಗ್ರಾಮದ ಕಾರ್ಪಾಡಿ ಎಂಬಲ್ಲಿ ನಡೆದಿದೆ. ಆರ್ಯಾಪು ಗ್ರಾಮದ ಕಾರ್ಪಾಡಿ ಬೈಲು ನಿವಾಸಿ ಮೋಹನ್ ಭಂಡಾರಿ ಅವರ ದನದ ಕೊಟ್ಟಿಗೆ ಬೆಂಕಿಗಾಹುತಿಯಾಗಿದೆ. ಮೋಹನ ಭಂಡಾರಿ ಮನೆಯ ಪಕ್ಕದಲ್ಲೇ ಇರುವ ಹೆಂಚಿನ ಮಾಡಿನ ದನದ ಕೊಟ್ಟಿಗೆಗೆ ಬೆಂಕಿ ಹತ್ತಿಕೊಂಡು ಉರಿಯತೊಡಗಿದ್ದು ನೆರೆಯ ಮಂದಿ ಸೇರಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಹೊರತಂದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ದನದ ಕೊಟ್ಟಿಗೆ ಬಹುತೇಕ ಹಾನಿಗೊಂಡಿದೆ.
ಕ್ಷೇತ್ರಕ್ಕೆ ಬ್ರಹ್ಮಕಲಶಕ್ಕಿಂತ ಭಕ್ತರು ಬರುವುದು ಮುಖ್ಯ : ಕ್ಯಾ.ಬ್ರಿಜೇಶ್ ಚೌಟ ಅಭಿಪ್ರಾಯ