ಮೀನುಗಾರಿಕೆಗೆ ಸಮುದ್ರಕ್ಕೆ ಹೋಗಿದ್ದ ಬೋಟ್​​ನಲ್ಲಿ ಬೆಂಕಿ...

Fishing Boat
Published on

ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಿಂದ ಕೆಲವೇ ಅಂತರಗಳಷ್ಟು ದೂರ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಬಂದರಿನಿಂದ ಕಣ್ಣಳತೆ ದೂರಲ್ಲಿ ಸಮುದ್ರದ ಮಧ್ಯ ಬೋಟ್​​ನಿಂದ ಕಪ್ಪಾದ ಹೊಗೆ ಹೋಗುತ್ತಿರುವ ಫೋಟೋ ವೈರಲ್​ ಆಗಿದೆ.

ಮೀನುಗಾರಿಕಾ ದೋಣಿಯಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಆಂಧ್ರಪ್ರದೇಶ ಬಂದರು ಠಾಣೆ ಪೊಲೀಸರು ತಿಳಿಸಿದ್ದಾರೆ. ಹಾಗೇ, ಯಾವುದೇ ಸಾವು-ನೋವು ಉಂಟಾಗಲಿಲ್ಲ ಎಂದೂ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: VIDEO| ಏಲಿಯನ್​ ರೀತಿಯ ಮೇಕೆ: ಮೂಗಿಲ್ಲ ಆದ್ರೆ ಬಾಯಿಯೊಳಗಿದೆ ಕಣ್ಣು, ವಿಚಿತ್ರ ಹುಟ್ಟಿಗೆ ಕಾರಣವೇನು?

ಸಾಗರದಲ್ಲಿರುವ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಮೊದಲು ಪೊಲೀಸ್​ ಅಧಿಕಾರಿಯೋರ್ವ ಮೊದಲು ನೋಡಿದ್ದಾರೆ. ಅದರಲ್ಲಿರುವ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ವಿಶಾಖಪಟ್ಟಣಂ ಡಿಸಿಪಿ ಸುರೇಶ್​ ಬಾಬು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net