ಪ್ರಿಂಟಿಂಗ್ ಮಳಿಗೆಗೆ ಬೆಂಕಿ

benki
Published on

ಶಿರಸಿ: ಅಗ್ನಿ ಅವಘಡದಿಂದಾಗಿ ನಗರದ ನಟರಾಜ ರಸ್ತೆಯಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಮಳಿಗೆ ಸುಟ್ಟು ಕರಕಾಲದ ಘಟನೆ ಸೋಮವಾರ ನಡೆದಿದೆ.

ಸೀತಾರಾಮ ಎಂಬುವವರ ಕನ್ನಿಕಾ ಪ್ರಿಂಟರ್ಸ್ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮೂರು ಪ್ರಿಂಟಿಂಗ್ ಮಿಷನ್, ಯಂತ್ರೋಪಕರಣಗಳು, ಸಿದ್ಧಗೊಂಡಿದ್ದ ಫ್ಲೆಕ್ಸ್ ಹಾನಿಗೀಡಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಆರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net