ತಡರಾತ್ರಿ ನಡೆದ ಭೀಕರ ಅಗ್ನಿ ದುರಂತಕ್ಕೆ ಲಕ್ಷಾಂತರ ರೂ. ಮೌಲ್ಯದ ಪ್ಲೈವುಡ್​ ನಾಶ

fire godown
Published on

ಬೆಂಗಳೂರು: ನಿನ್ನೆ ತಡ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಗ್ನಿ ಅವಘಡ ನಡೆದಿದ್ದು ಎರಡೂ ಕಡೆ ಗೋಡೌನ್​ಗಳು ಬೆಂಕಿಗೆ ಆಹುತಿ ಆಗಿವೆ. ನಿನ್ನೆ ರಾತ್ರಿ ನಗರದ ಟಿಂಬರ್ ಲೇಔಟ್​ನಲ್ಲಿ ಪ್ಲೈವುಡ್ ಗೋದಾಮಿಗೆ ಬೆಂಕಿ ಬಿದ್ದಿದ್ದು ನವೀನ್ ಗುಪ್ತಾ ಎಂಬುವವರಿಗೆ ಸೇರಿರುವ ಗೋದಾಮು ಸಂಪೂರ್ಣ ಭಸ್ಮವಾಗಿದೆ.

ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲೈ ವುಡ್ ಸುಟ್ಟು ಬೂದದಿಯಾಗಿದೆ. ಮಾಲೀಕ ನವೀನ್ ಗುಪ್ತ, ಕಳೆದ 7 ವರ್ಷದಿಂದ ಗೋಡನ್ ನಡೆಸುತ್ತಿದ್ದರು. ರಾತ್ರಿ ಬಿದ್ದ ಬೆಂಕಿಯಿಂದಾಗಿ ಮಾಲೀಕರು ಆಘಾತಕ್ಕೆ ಒಳಗಾಗಿದ್ದಾರೆ.

ನವೀನ್​ ಗುಪ್ತಾ ಸಂಜೆ ಎಂದಿನಂತೆ ಗೋಡನ್ ಗೆ ಬೀಗಾ ಹಾಕಿ‌ ಹೋಗಿದ್ದಾರೆ. ಗೋದಾಮಿನಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ದೊಡ್ಡದಾಗುತ್ತಿದ್ದಂತೆ ಸುತ್ತಮುತ್ತಲು ಇದ್ದ ಜನರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು 10 ಅಗ್ನಿಶಾಮಕ ವಾಹನಗಳು ಬಂದು ಬೆಂಕಿ‌ನಂದಿಸಿವೆ. ಆದರೆ ಸಂಪೂರ್ಣ ಗೋಡನ್ ಸುಟ್ಟು ಭಸ್ಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net