ಫ್ಯಾನ್ಸಿ ಅಂಗಡಿಯಲ್ಲಿ ಬೆಂಕಿ ಅನಾಹುತ

fancy
ಬೆಂಕಿಗಾಹುತಿಯಾದ ಫ್ಯಾನ್ಸಿ ಸ್ಟೋರ್
Published on

ಬೈಂದೂರು: ನಾವುಂದ ಜಂಕ್ಷನ್‌ನ ಪ್ಲಾಜಾ ಗ್ರೋ ಕಾಂಪ್ಲೆಕ್ಸ್‌ನಲ್ಲಿರುವ ಫ್ಯಾನ್ಸಿ ಸ್ಟೋರ್‌ಗೆ ಶುಕ್ರವಾರ ಮಧ್ಯಾಹ್ನ ಬೆಂಕಿ ತಗುಲಿದ್ದು, ಅಂಗಡಿಯೊಳಗಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.

ಪ್ರತಿಭಾ ವಿಜೇಂದ್ರ ಆಚಾರ್ಯ ಎಂಬುವರು ಫ್ಯಾನ್ಸಿ ಅಂಗಡಿ ಜತೆಗೆ ಟೈಲರಿಂಗ್ ಕೂಡ ನಡೆಸುತ್ತಿದ್ದರು. ಅವರು ಉಪ್ರಳ್ಳಿ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಮೀಪದ ಅಂಗಡಿಯವರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅಂಗಡಿಯೊಳಗಿದ್ದ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಷನರಿ ವಸ್ತುಗಳು ಹಾಗೂ 5 ಸಾವಿರ ರೂ. ಬೆಂಕಿಗೆ ಆಹುತಿಯಾಗಿದೆ. ಬೈಂದೂರು ಪೊಲೀಸರು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net