

ಸಾವಿನಲ್ಲೂ ಸಂಭ್ರಮಿಸುವವರು, ಸಾವನ್ನೂ ನೋಡಿ ಖುಷಿಪಡುವರು ಸಾಕಷ್ಟು ಮಂದಿ. ಇತ್ತೀಚೆಗೆ ಸಾವಿಗೀಡಾದ ಇದೀಗ ಇಬ್ಬರು ಬಾಲಿವುಡ್ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಸಾವನ್ನು ವ್ಯಂಗ್ಯ ಮಾಡಿದ್ದ ನಟ, ನಿರ್ಮಾಪಕ ಮತ್ತು ಬರಹಗಾರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು, ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ರಿಷಿ ಕಪೂರ್ ಸಾವಿಗೂ ಮುನ್ನ ಅವರ ಸ್ಥಿತಿ ಚಿಂತಾಜನಕ ವಾಗಿರುವ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದಂತೆ, ‘ಸರ್ ಗುಣಮುಖವಾಗಿ ಆದಷ್ಟು ಬೇಗ ಬನ್ನಿ, ಹಾಗೇ ಹೋಗಬೇಡಿ. ಯಾಕೆಂದರೆ ಇನ್ನೆರಡು ದಿನದಲ್ಲಿ ಮದ್ಯದಂಗಡಿಗಳ ಬಾಗಿಲು ತೆರೆಯಲಿವೆ’ ಎಂದು ಒಂದರ ಮೇಲೊಂದರಂತೆ ಟ್ವಿಟ್ ಮಾಡಿದ್ದರು. ಆ ಟ್ವಿಟ್ಗೆ ನೆಟ್ಟಿಗರಿಂದ ಪರ ವಿರೋಧ ಚರ್ಚೆಯಾಗಿತ್ತು. ಅದೇ ರೀತಿ ಇರ್ಫಾನ್ ಖಾನ್ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿ ಕೆಆರ್ಕೆ ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ: ಬೇತಾಳನ ಬೆನ್ನಿಗೆ ನಿಂತ ಶಾರುಖ್ ಖಾನ್!
ಹೀಗೆ ಬಾಲಿವುಡ್ ನಟನ ವಿರುದ್ಧ ಈ ರೀತಿಯ ಹೇಳಿಕೆ ನೀಡಿದ್ದನ್ನು ಖಂಡಿಸಿ ಯುವ ಸೇನಾ ಕಮೀಟಿಯ ಸದಸ್ಯ ರಾಹುಲ್ ಕನಾಲ್, ಕೆಆರ್ಕೆ ವಿರುದ್ಧ ಸಬರ್ಬನ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದರು. ಸದ್ಯ ಸಾರ್ವಜನಿಕ ಮಾನಹಾನಿ ಪ್ರಕರಣದಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ರಿಷಿ ಕಪೂರ್ ಸಾಯುವುದಕ್ಕೂ ಮುನ್ನ ಟ್ವಿಟರ್ನಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ‘ಸ್ವಲ್ಪ ವಿಚಾರಿಸಿ. ಪರವಾನಗಿ ಇರುವಂಥ ಮದ್ಯದಂಗಡಿಗಳನ್ನು ಸಂಜೆ ಮೇಲೆ ತೆರೆದರೆ ಒಳ್ಳೆಯದು. ತಪ್ಪು ತಿಳಿಯಬೇಡಿ. ಬಹುತೇಕರೆಲ್ಲರೂ ಈಗ ಮನೆಯಲ್ಲಿದ್ದಾರೆ. ಅದರಲ್ಲೂ ಪುರುಷರೂ ಮನೆಯಲ್ಲಿಯೇ ಡಿಪ್ರೆಷನ್ ಮೂಡ್‌ನಲ್ಲಿದ್ದಾರೆ. ಪೊಲೀಸರು, ವೈದ್ಯರು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ. ಹಾಗಾಗಿ ಒಂದಷ್ಟು ಮದ್ಯ ಮಾರಾಟಕ್ಕೂ ಅನುವು ಮಾಡಿಕೊಡಿ. ನಿಮ್ಮ ಗಮನಕ್ಕೆ ಇದೆಯೊ ಇಲ್ಲವೋ ಗೊತ್ತಿಲ್ಲ, ಈಗಾಗಲೇ ಬ್ಲಾಕ್‌ನಲ್ಲಿ ಎಣ್ಣೆ ಮಾರಾಟವಾಗುತ್ತಿದೆ’ ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್)