More

    ಡೈನೊಸಾರ್ ಮೊಟ್ಟೆಗಳು ಪತ್ತೆ!

    ನವದೆಹಲಿ: ಡೈನೊಸಾರ್​ನ ಒಂದು ಪ್ರಭೇದವಾದ ಟೈಟನೊಸಾರ್​ನ 52 ಮೊಟ್ಟೆಗಳನ್ನು ದೆಹಲಿ ವಿಶ್ವ ವಿದ್ಯಾಲಯದ ಸಂಶೋಧಕರು ಮಧ್ಯ ಪ್ರದೇಶದ ರಾಷ್ಟ್ರೀಯ ಉದ್ಯಾನವನದ ಸಮೀಪ ಪತ್ತೆ ಹಚ್ಚಿದ್ದಾರೆ.

    ಆ ಪೈಕಿ ಹತ್ತು ಮೊಟ್ಟೆಗಳು ಒಂದರ ಒಳಗೊಂದು ಸೇರಿಕೊಂಡಿದ್ದು ಒಂದು ಮೊಟ್ಟೆ ‘ಅಸಹಜವಾಗಿದೆ’ ಎಂದು ಸಂಶೋಧಕರು ಹೇಳಿದ್ದಾರೆ. ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಡೈನೊಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್​ನಲ್ಲಿ ಈ ಮೊಟ್ಟೆಗಳು ಪತ್ತೆಯಾಗಿವೆ. ಟೈಟನಾಸೊರ್​ಗಳು ಸೌರಾಪೋಡ್ ಡೈನೊಸಾರ್​ಗಳ ವಿಶಿಷ್ಟ ಗುಂಪಿಗೆ ಸೇರಿದ್ದಾಗಿದೆ. ನೇಚರ್ ಗ್ರೂಪ್ ಪತ್ರಿಕೆ ‘ಸೈಂಟಿಫಿಕ್ ರಿಪೋರ್ಟ್ಸ್’ನಲ್ಲಿ ಈ ಶೋಧನೆಯ ವರದಿ ಪ್ರಕಟವಾಗಿದೆ.

    ಡೈನೊಸಾರ್​ನೊಳಗೆ ಮೊಟ್ಟೆಯೊಳಗೆ ಮೊಟ್ಟೆಯ ಅಪರೂಪದ ವಿದ್ಯಮಾನ ಇದೇ ಮೊದಲ ಬಾರಿಗೆ ಕಂಡುಬಂದಿದೆ. ಹಕ್ಕಿಗಳಲ್ಲಿ ಮಾತ್ರ ಈ ರೀತಿ ಆಗುತ್ತದೆಯೇ ಹೊರತು ಸರೀಸೃಪಗಳಲ್ಲಿ ಆಗುವುದಿಲ್ಲ. ಟೈಟನೊಸಾರಿಡ್ ಡೈನೊಸಾರ್​ಗಳ ಮೊಟ್ಟೆಯೊಳಗೆ ಮೊಟ್ಟೆಯ ಈ ವಿದ್ಯಮಾನವು ಅವುಗಳ ಅಂಡನಾಳವು ಹಕ್ಕಿಗಳ ಅಂಡನಾಳದ ಸಂರಚನೆಗೆ ಹೋಲುತ್ತದೆ ಎಂಬುದನ್ನು ಸೂಚಿಸುತ್ತಿದ್ದು ಹೊಸ ಬೆಳಕು ಚೆಲ್ಲಿದೆ. ಇಂಥ ವಿದ್ಯಮಾನವು ಹಕ್ಕಿಗಳಿಗೆ ಮಾತ್ರ ಸೀಮಿತವಲ್ಲ ಎನ್ನುವುದನ್ನು ಅದು ತೋರಿಸಿಕೊಟ್ಟಿದೆ ಎಂದು ಸಂಶೋಧನಾ ವರದಿ ಅಭಿಪ್ರಾಯ ಪಟ್ಟಿದೆ.

    ‘777 ಚಾರ್ಲಿ’ ಚಿತ್ರ ವೀಕ್ಷಿಸಿದ ಶ್ವಾನ ಪ್ರೇಮಿ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts