VIDEO| 'ನಾ ಹೇಳಿದವರಿಗೇ ನೀ ವೋಟ್​ ಹಾಕ್ಬೇಕು' ಲೋಕಲ್​ ವಾರ್​ಗಾಗಿ ಅಕ್ಕ ತಮ್ಮನ ಫೈಟ್​!

fight
Published on

ಮಂಡ್ಯ: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಸ್ವಂತ ಅಕ್ಕ ತಮ್ಮನೇ ಕೈ ಕೈ ಮಿಲಾಯಿಸಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಯಾರಿಗೆ ಮತ ಹಾಕಬೇಕು ಎನ್ನುವ ವಿಚಾರಕ್ಕೆ ಜಗಳ ಆಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಹಾಲಿನ ಡೇರಿ ನಿರ್ದೇಶಕಿಯಾಗಿರುವ ಶಾರದಮ್ಮ ಮತ ಹಾಕಲೆಂದು ಹೊರಟಿದ್ದರು. ಈ ವೇಳೆ ಅಡ್ಡಗಟ್ಟಿದ ತಮ್ಮ, 'ನಾನು ಹೇಳಿದವರಿಗೇ ನೀನು ಮತ ಹಾಕಬೇಕು' ಎಂದು ಹೇಳಿದ್ದಾನೆ. ಅದಕ್ಕೆ ಅಕ್ಕ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಅಕ್ಕನ ಕುತ್ತಿಗೆ ಹಿಡಿದು ಎಳೆದಿದ್ದಾನೆ. ಶಾರದಮ್ಮನ ಮಗ ಮಧ್ಯ ಪ್ರವೇಶಿಸಿದ್ದು, ಜಗಳ ನಿಲ್ಲಿಸಿದ್ದಾನೆ.

ಅಕ್ಕ ತಮ್ಮ ಹೇಗೆ ಜಗಳವಾಡಿದ್ದಾರೆ ನೋಡಿ...

ಮಂಡ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net