

ರಾಯಚೂರು: ಗರ್ಭಿಣಿ ಒಬ್ಬರನ್ನು ಹೆರಿಗೆಗೆಂದು ಆಸ್ಪತ್ರೆಗೆ ಕರೆತರಲು ಹೊರಟಿದ್ದ ಆ್ಯಂಬುಲೆನ್ಸ್ಗೆ ಅಪಘಾತವಾಗಿದ್ದು, ಸ್ಟಾಪ್ ನರ್ಸ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಲಿಂಗಸುಗೂರಿ ತಾಲೂಕಿನ ಪಾಮನಕಲ್ಲೂರಿನಿಂದ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆತರಬೇಕಿತ್ತು. ಅದಕ್ಕೆಂದು ಸ್ಟಾಪ್ ನರ್ಸ್ ಸಂಗಮೇಶ್ (30)ನೊಂದಿಗೆ ಚಾಲಕ ಹನುಮಪ್ಪ ಆ್ಯಂಬುಲೆನ್ಸ್ನಲ್ಲಿ ಹೊರಟಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಲಿಂಗಸಗೂರಿನ ಸರ್ಜಾಪುರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಸಂಗಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಹನುಮಪ್ಪನಿಗೆ ಗಂಭೀರ ಗಾಯವಾಗಿದೆ.
ಭತ್ತ ತುಂಬಿದ ಲಾರಿಯನ್ನು ಇಂಡಿಕೇಟರ್ ಹಾಕದೆಯೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅವಸರದಲ್ಲಿ ಹೊರಟಿದ್ದ ಅಂಬ್ಯುಲೆನ್ಸ್ ಲಾರಿ ಕಾಣಿಸದ ಹಿನ್ನೆಲೆಯಲ್ಲಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ರಾ