More

    ಬೀದಿಗೆ ಬಂದ ಕಾಂಗ್ರೆಸ್​ ಜಗಳ

    ಕೋಲಾರ:ಸಚಿವ ಕೆ.ಎಚ್​.ಮುನಿಯಪ್ಪ ಮತ್ತು ಶಾಸಕ ಕೊತ್ತೂರು ಜಿ.ಮಂಜುನಾಥ್​ ಬೆಂಬಲಿಗರ ಒಳ ಜಗಳವು ಬೀದಿಗೆ ಬಂದಿದೆ. ಎರಡು ಗುಂಪುಗಳ ನಡುವೆ ಮತಿಚಮಕಿ, ಕೈಕೈ ಮಿಲಾಯಿಸಿಕೊಂಡ ಟನೆ ಮಂಗಳವಾರ ಕಾಂಗ್ರೆಸ್​ ಭವನದಲ್ಲಿ ನಡೆಯಿತು.

    ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್​.ರಮೇಶ್​ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಕುಮಾರ್​ ಸಮ್ಮುಖದಲ್ಲಿ ಬೂತ್​ ಸಭೆಯನ್ನು ನಗರದ ಕಾಂಗ್ರೆಸ್​ ಭವನದಲ್ಲಿ ಬೆಳಗ್ಗೆ 11.30ಕ್ಕೆ ಕರೆಯಲಾಗಿತ್ತು.
    ಸಭೆಯು ಎರಡು ತಾಸು ತಡವಾಗಿ ಶುರುವಾಯಿತು, ಅದಕ್ಕೂ ಮುನ್ನ ಶಾಸಕ ಕೊತ್ತೂರು ಮಂಜುನಾಥ್​ ಬೆಂಬಲಿಗರು ಗುಂಪು ಸೇರಿಕೊಂಡು ಪ್ಲೇಕ್ಸ್​ ನಲ್ಲಿ ಅಳವಡಿಸಿರುವ ನಾಯಕರ ಭಾವ ಚಿತ್ರ ಕುರಿತು ಚರ್ಚಿಸುತ್ತಿದ್ದರು. ಸಭೆಯು ಶುರುವಾಗುತ್ತಿದ್ದಂತೆ ಒಂದು ಗುಂಪು ಪ್ಲೇಕ್ಸ್​ ವಿಚಾರವಾಗಿ ಆಕ್ಷೇಪವಾಯಿತು.
    ಬ್ಯಾನರ್​ನಲ್ಲಿ ತಮ್ಮ ನಾಯಕರ ಫೋಟೋ ಹಾಕಿಲ್ಲದ ಕಾರಣಕ್ಕೆ ಆರಂಭಗೊಂಡ ಮಾತಿನ ಚಕಮಕಿಯು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹಲ್ಲೆ ನಡೆಸುವ ಮಟ್ಟಕ್ಕೆ ತೆರಳಿದ ಘಟನೆ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಮಂಗಳವಾರ ನಡೆದ ಬೂತ್​ ಏಜೆಂಟರ ಸಭೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರ ಎದುರೇ ಜರುಗಿತು.
    ಪ್ಲೇಕ್ಸ್​ನಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್​ ಅಹಮದ್​, ಫ್ಲೆಕ್ಸ್​ನಲ್ಲಿ ಕೊತ್ತೂರು ಮಂಜುನಾಥ್​, ವಿಧಾನ ಪರಿಷತ್​ ಸದಸ್ಯ ಅನಿಲ್​ ಕುಮಾರ್​, ವಿಧಾನ ಪರಿಷತ್​ ಮಾಜಿ ಸಭಾಪತಿ ಕೆ.ಆರ್​.ರಮೇಶ್​ ಕುಮಾರ್​ ಭಾವಚಿತ್ರ ಇಲ್ಲ ಎಂಬ ಕಾರಣಕ್ಕೆ ನಗರಸಭೆ ಸದಸ್ಯ ಅಂಬರೀಶ್​ ಅಕ್ಷೇಪ ವ್ಯಕ್ತಪಡಿಸಿ, ಊರುಬಾಗಿಲು ಶ್ರೀನಿವಾಸ್​ ವರ್ತನೆಗೆ ಆರೋಪಿಸಿದ.
    ಇದರ ಮಧ್ಯೆ ಮುಖಂಡ ಶಿವಕುಮಾರ್​ ಏರು ಧ್ವನಿಯಲ್ಲಿ ವೇದಿಕೆಯಲ್ಲಿ ಮುಖಂಡರ ಭಾಷಣಕ್ಕೆ ಅಡ್ಡಿಪಡಿಸಿದ. ಆನಂತರ ವೇದಿಕೆಯ ಮೇಲಿದ್ದ ಜಿಲ್ಲಾ ಕಾಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​ ವಿರುದ್ಧ ಘೋಷಣೆ ಕೂಗಿ ಸಭೆಯಿಂದ ಹೊರ ಹೋಗುವಂತೆ ಥಳಿಸಿ, ಏಕವಚನದಲ್ಲಿ ನಿಂಧಿಸಿ ಕೊರಳಪಟ್ಟಿ ಹಿಡಿದು ಎಳೆದಾಡಿ ತಲೆಗೆ ಡಿಚ್ಚಿ ಹೊಡೆದ.
    ಕೂಡಲೇ ಎರಡೂ ಬಣಗಳ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಿ, ಜಗಳ ಬಿಡಿಸಿದರು. ಆದರೂ ಮುಖಂಡರುಗಳು ಕೈಕೈ ಮಿಲಾಯಿಸಿಕೊಳ್ಳುವುದು ಮುಂದುವರೆಯಿತು. ಇತ್ತ ಮಾತಿನ ಚಕಮಕಿಯನ್ನು ಸಮಾಧಾನಪಡಿಸುವ ಸಲುವಾಗಿ ಎದ್ದು ನಿಂತಿದ್ದ ಪಿ.ಆರ್​.ರಮೇಶ್​ ಹಾಗೂ ರಾಜ್​ ಕುಮಾರ್​ ಆತಂಕಕ್ಕೆ ಒಳಗಾಗುವಂತಾಯಿತು.
    ಘಟನೆಯಿಂದಾಗಿ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು. ಸ್ಥಳದಲ್ಲಿದ್ದ ಗಲ್​ಪೇಟೆ ಠಾಣೆ ಪೊಲೀಸರು ಇನ್ನಷ್ಟು ಸಿಬ್ಬಂದಿಯನ್ನು ಕರೆಯಿಸಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.
    ಗಾಯಗೊಂಡ ಊರುಬಾಗಿಲು ಶ್ರೀನಿವಾಸ್​ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾದರೆ, ಶಿವು ಜಿಲ್ಲಾಸ್ಪತ್ರೆಗೆ ದಾಖಲಾದ.
    ಊರುಬಾಗಿಲು ಶ್ರೀನಿವಾಸ್​ ಹಾಗೂ ವೈಭೋಗ್​ ಶಿವು ನಡುವಿನ ಜಗಳ ಒಂದು ಕಡೆಯಾದರೆ, ಆಹಾರ ಸಚಿವ ಕೆ.ಎಚ್​.ಮುನಿಯಪ್ಪ ಆಪ್ತ, ಕಾಂಗ್ರೆಸ್​ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್​ ಹಾಗೂ ಕೈ ಕಾರ್ಯಕರ್ತ ವೆಂಕಟೇಶ್​ ಎನ್ನುವರ ನಡುವೆ ಮತ್ತೊಂದು ಗಲಾಟೆ ನಡೆಯಿತು. ನನ್ನ ಕೆಟ್ಟದಾಗಿ ನಿಂದಿಸಿದ್ದಾರೆಂದು ಎಸ್ಸಿ ಘಟಕದ ಅಧ್ಯಕ್ಷ ಜಯದೇವ್​ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಉಭಯ ನಾಯಕರು ಪರಸ್ಪರ ಕೈ ಕೈ ಮಿಲಾಯಿಸಿದರು.
    ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಮಂಗಳವಾರ ಬೂತ್​ ಏಜೆಂಟರ ಸಭೆಯಲ್ಲಿ ನಡೆದ ಗಲಾಟೆಯಿಂದಾಗಿ ಪಕ್ಷದಲ್ಲಿ ಆಂತರಿಕ ಭಿನ್ನಮತ, ಗುಂಪುಗಾರಿಕೆ ಮತ್ತಷ್ಟು ತೀವ್ರವಾಗಿದ್ದು, ನಗೆಪಾಟಲಿಗೆ ಕಾರಣವಾಗಿದೆ.
    ಕಾಂಗ್ರೆಸ್​ ಭವನದಲ್ಲಿ ಮಂಗಳವಾರ ನಡೆದ ಬೂತ್​ ಏಜೆಂಟರ ಸಭೆಯಲ್ಲಿ ಸಚಿವ ಕೆ.ಎಚ್​.ಮುನಿಯಪ್ಪ ಮತ್ತು ಶಾಸಕ ಕೊತ್ತೂರು ಜಿ.ಮಂಜುನಾಥ್​ ಬಣದ ಕಾರ್ಯಕರ್ತರ ನಡುವೆ ಬೀದಿ ಜಗಳವು ರಾಜಕೀಯವಾಗಿ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷದಲ್ಲಿನ ಆಂತರಿಕ ಭಿನ್ನಮತ ಸ್ಪೋಟಗೊಂಡಿರುವುದು ಮುಂದಿನ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಆತಂಕ ಕಾಂಗ್ರೆಸ್​ ಜಿಲ್ಲಾ ಸಮಿತಿ ಪದಾಧಿಕಾರಿಗಳಲ್ಲಿ ಎದುರಾಗಿದೆ.
    ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ, ಮಹಿಳಾ ಟಕದ ಅಧ್ಯೆ ರತ್ಮಮ್ಮ, ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ ಬಾಬು, ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಉದಯ್​ ಶಂಕರ್​, ಎಸ್ಸಿ ಟಕದ ಜಯದೇವ್​ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts