ಎದುರಾಳಿ ಆಟಗಾರನಿಗೆ ಇಂಜುರಿ ಆಗುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಡೇಂಜರೆಸ್ ಟ್ಯಾಕಲ್ ಮಾಡುವುದು. ಉದಾಹರಣೆಗೆ, ಕಾಲಿನ ಹಿಂಭಾಗಕ್ಕೆ ಜೋರಾಗಿ ಕಿಕ್ ಮಾಡುವುದು ಅಥವಾ ತುಂಬಾ ರಫ್ ಆಗಿ ಆಡುವುದು.
ಅಗ್ರೆಸ್ಸಿವ್ ಆಟ
ಚೆಂಡು ಹತ್ತಿರ ಇಲ್ಲದಿದ್ದರೂ ಎದುರಾಳಿ ಆಟಗಾರ, ರೆಫರಿ, ಸಹ ಆಟಗಾರ ಅಥವಾ ಪ್ರೇಕ್ಷಕರ ಮೇಲೆ ದೈಹಿಕವಾಗಿ ಹಲ್ಲೆಗೈಯುವುದು. ಅಂದರೆ ಕೈಯಿಂದ ಥಳಿಸುವುದು, ನೂಕುವುದು, ಕಾಲಿನಿಂದ ಒದೆಯುವುದು ಅಥವಾ ತಲೆಯಿಂದ ಮುಟ್ಟುವುದು.
ನಿಂದನೆ ಅಥವಾ ಅಶ್ಲೀಲ ಪದ/ಸನ್ನೆ ಬಳಕೆ
ಮೈದಾನದಲ್ಲಿ ರೆಫರಿಗಳ ಎದುರೇ ಎದುರಾಳಿ ತಂಡದ ಆಟಗಾರರ ಅಥವಾ ಪ್ರೇಕ್ಷಕರ ವಿರುದ್ಧ ಕೆಟ್ಟ ಪದಗಳನ್ನು ಬಳಸುವುದು, ನಿಂದಿಸುವುದು ಅಥವಾ ಅಶ್ಲೀಲ ಸನ್ನೆಗಳನ್ನು ಮಾಡುವುದು.
ಉದ್ದೇಶಪೂರ್ವಕ 'ಹ್ಯಾಂಡ್‌ಬಾಲ್'
ಗೋಲ್‌ಕೀಪರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ, ತನ್ನ ಕೈಯನ್ನು ಬಳಸಿ ಎದುರಾಳಿ ತಂಡದ ಗೋಲನ್ನು ತಡೆಯುವುದು.
DOGSO ರೂಲ್ಸ್
ಎದುರಾಳಿ ಆಟಗಾರನು ಸುಲಭವಾಗಿ ಗೋಲು ಬಾರಿಸುವ ಸಮಯದಲ್ಲಿ, ಆತನನ್ನು ನಿಯಮಗಳನ್ನು ಉಲ್ಲಂಘಿಸಿ, ಹಿಂದಿನಿಂದ ತಳ್ಳುವುದು ಅಥವಾ ಕಾಲಿಗೆ ಅಡ್ಡಹಾಕಿ ಬೀಳಿಸಿ ಗೋಲು ತಪ್ಪಿಸುವ ಕೆಲಸ ಒಪ್ಪುವಂತದ್ದಲ್ಲ