ಜನಾಂಗೀಯ, ತಾರತಮ್ಯ ಮತ್ತು ಅವಾಚ್ಯ ಪದಗಳ ಬಳಕೆಯನ್ನು ಕಟ್ಟುನಿಟ್ಟಿನಿಂದ ತಡೆಯುವ ಉದ್ದೇಶದಿಂದ ಫಿಫಾ, ಏಪ್ರಿಲ್‌ನಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆಟಗಾರರು ತಮ್ಮ ಕೈಗಳಿಂದ ಬಾಯಿ ಮುಚ್ಚಿಕೊಂಡರೆ, ಅವರಾಡಿದ ಮಾತೇನು ಎಂದು ತಿಳಿಯೋದಿಲ್ಲ. ಇದು ಕಂಡುಹಿಡಿಯಲು ಕಷ್ಟವಾಗುತ್ತದೆ ಮತ್ತು ಅಂತಹ ತಪ್ಪನ್ನು ಮಾಡುವವರ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲು ಈ ಕಠಿಣ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ,(ಏಜೆನ್ಸೀಸ್).