ಫ್ರಾನ್ಸ್ ತಂಡಕ್ಕೆ ಬರೋಬ್ಬರಿ 14 ವರ್ಷಗಳ ಕಾಲ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಕೋಚ್ ಡಿಡಿಯರ್ ಡೆಶಾಂಪ್ಸ್ ಅವರಿಗೆ ಇದು ಕೊನೆಯ ಪಂದ್ಯವಾಗಿತ್ತು. ಪಂದ್ಯದ ಮುಕ್ತಾಯದ ನಂತರ ಅವರು ಆಟಗಾರರನ್ನು ಆಲಂಗಿಸಿ, ನೆರೆದಿದ್ದ 64,478 ಪ್ರೇಕ್ಷಕರತ್ತ ಕೈಬೀಸಿ ಮೈದಾನದಿಂದ ಭಾವುಕರಾಗಿ ನಿರ್ಗಮಿಸಿದರು. ಭಾನುವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿದ್ದು, ಮೆಸ್ಸಿಗೆ ಎಂಬಾಪ್ಪೆ ದಾಖಲೆ ಮುರಿಯಲು ಒಂದು ಕೊನೆಯ ಅವಕಾಶವಿದೆ(ಏಜೆನ್ಸೀಸ್).