ಕ್ರಿಸ್ಟಿಯಾನೊ ರೊನಾಲ್ಡೊ ಪಾಲಿಗೆ ಇದು ಕೊನೆಯ ವಿಶ್ವಕಪ್ ಪಂದ್ಯ ಎಂದೇ ಹೇಳಲಾಗುತ್ತಿದೆ. ಪ್ರಸ್ತುತ ಟೂರ್ನಿಯಲ್ಲಿ ಒಟ್ಟು 3 ಗೋಲು ಗಳಿಸಿರುವ ರೊನಾಲ್ಡೊ, ಈ ಕ್ವಾರ್ಟರ್‌ಫೈನಲ್ ಪಂದ್ಯದಲ್ಲೇ ಅತಿ ಹೆಚ್ಚು ಬಾರಿ ಚೆಂಡನ್ನು ಸ್ಪರ್ಶಿಸಿರುವ ಆಟಗಾರ. ಆದ್ರೆ, ತಮ್ಮ ತಂಡವನ್ನು ವಿಶ್ವಕಪ್ ಟ್ರೋಫಿ ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದ ಅವರು ಕಣ್ಣೀರಾಕಿದ್ದು, ದಂತಕಥೆಯ ಅಭಿಮಾನಿಗಳಲ್ಲಿಯೂ ಕಣ್ಣೀರು ತರಿಸಿತು.