FIFA ದಲ್ಲಿ ಮತ್ತೊಂದು ವಿವಾದ: ಮೆಸ್ಸಿ ಸೇರಿ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ವಿವರ ಸೋರಿಕೆ; ಆಯೋಜಕರ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್​! Lionel Messi Passport leaked

ಲಿಯೋನಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆ ಸೋರಿಕೆ
ಲಿಯೋನಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆ ಸೋರಿಕೆ
Published on

ಪ್ರಮುಖ ಮುಖ್ಯಾಂಶಗಳು

  • 2026ರ ಫಿಫಾ ವಿಶ್ವಕಪ್ ಆರಂಭದಲ್ಲೇ ವಿವಾದದ ಕಿಡಿ!
  • ಲಿಯೋನಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್‌ಪೋರ್ಟ್ ಸಂಖ್ಯೆ ಸೋರಿಕೆ
  • ಆಯೋಜಕರ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್​
ಫುಟ್ಬಾಲ್​: 2026 ರ ಫಿಫಾ ವಿಶ್ವಕಪ್​ ವಿವಾದಗಳ ಮೂಲಕವೇ ಆರಂಭವಾಗಿದೆ ಎಂದರೆ ಸುಳ್ಳಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಸೊಮಾಲಿಯಾದ ರೆಫರಿ ಒಮರ್ ಅಬ್ದುಲ್ಕದಿರ್ ಅರ್ಟನ್​ನ್ನು ತವರಿಗೆ ವಾಪಸ್​ ಕಳಿಸಿದರೆ, ಈಗ ಅರ್ಜೆಂಟೀನಾದ ಆಟಗಾರರ ಪಾರ್ಸ್​ಪೋರ್ಟ್​ ದಾಖಲೆ ಸೋರಿಕೆ (Lionel Messi Passport leaked) ಯಾಗಿದೆ ಎಂದು ವರದಿಯಾಗಿದೆ.
ಮಂಗಳವಾರ (ಜೂ.9) ಅಲಬಾಮಾದ ಜೋರ್ಡಾನ್-ಹೇರ್ ಕ್ರೀಡಾಂಗಣದಲ್ಲಿ, ಐಸ್​ಲ್ಯಾಂಡ್​ ಜೊತೆ ನಡೆದ ಅಭ್ಯಾಸ ಪಂದ್ಯದಲ್ಲಿ ಲಿಯೋನಲ್​ ಮೆಸ್ಸಿ ಸೇರಿ ಇತರೆ ಅರ್ಜೆಂಟೀನಾ ಆಟಗಾರರ ಪಾಸ್​ಪೋರ್ಟ್​ ಸಂಖ್ಯೆಗಳನ್ನು ಟೀಂ ಶೀಟ್​ನಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ಟೀಂ ಶೀಟ್​ನಲ್ಲಿ ಪಾಸ್​ಪೋರ್ಟ್​ ಸಂಖ್ಯೆಯನ್ನು ಮರೆಮಾಚಬೇಕೆಂಬ ನಿಯಮವಿದ್ದರೂ ಸಹ ಇದನ್ನು ಮಾಡದಿರುವುದು ವೈಯಕ್ತಿಕ ದಾಖಲೆ ಸೋರಿಕೆ ಆರೋಪಕ್ಕೆ ಗುರಿಯಾಗಿದೆ.
ಹಾಗೂ ಇಲ್ಲಿ ಕೇವಲ ಅರ್ಜೆಂಟೀನಾದ ಆಟಗಾರರ ಪಾಸ್​ಪೋರ್ಟ್​ ದಾಖಲೆ ಮಾತ್ರ ಸೋರಿಕೆಯಾಗಿದ್ದು ಐಸ್​ಲ್ಯಾಂಡ್​ ಆಟಗಾರರ ಪಾಸ್​ಪೋರ್ಟ್​ನ್ನು ಬ್ಲರ್​ ಮಾಡಿರುವುದು ಫುಟ್ಬಾಲ್ ಅದರಲ್ಲೂ ಅರ್ಜೆಂಟೀನಾದ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

3-0 ಅಂತರದಲ್ಲಿ ಅರ್ಜೆಂಟೀನಾ ವಿಜಯ

ಅಂದು ನಡೆದ ಅಭ್ಯಾಸ ಪಂದ್ಯದಲ್ಲಿ ಶುಭಾರಂಭ ಮಾಡಿದ ಅರ್ಜೆಂಟೀನಾ ತಂಡ 3-0 ಅಂತರದಲ್ಲಿ ಐಸ್​ಲ್ಯಾಂಡ್​ ತಂಡವನ್ನು ಸೋಲಿಸಿತು. ಹ್ಯಾಮ್​​ಸ್ಟ್ರಿಂಗ್​ ಇಂಜುರಿಯಿಂದ ಬಳಲುತ್ತಿದ್ದ ಲಿಯೋನಲ್​ ಮೆಸ್ಸಿ, ಈ ಪಂದ್ಯದಲ್ಲಿ 2 ಗೋಲುಗಳನ್ನ ಗಳಿಸುವಲ್ಲಿ ಯಶಸ್ವಿಯಾದರು.
ಸೊಮಾಲಿಯಾ ರೆಫರಿಗೆ ಗೇಟ್​ಪಾಸ್​!
ಫುಟ್‌ಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ರೆಫರಿಯಾಗಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಬೇಕಾಗಿದ್ದ ಸೊಮಾಲಿಯಾದ ರೆಫರಿ ಒಮರ್ ಅಬ್ದುಲ್ಕದಿರ್ ಅರ್ಟನ್ ಅವರ ಕನಸು ಈಗ ಅಮೆರಿಕದ ನಿಯಮಗಳಿಂದಾಗಿ ನುಚ್ಚುನೂರಾಗಿದೆ. ಸ್ಥಳೀಯ ಭಯೋತ್ಪಾದಕ ಗುಂಪುಗಳೊಂದಿಗೆ ಅರ್ಟನ್ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.
2025ರ ಆಫ್ರಿಕಾದ ಅತ್ಯುತ್ತಮ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಟನ್, ಈ ಬಾರಿ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ಫಿಫಾ ವಿಶ್ವಕಪ್​ನಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಆದರೆ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಅಧಿಕಾರಿಗಳು ತಡೆದು, ವಾಪಸ್ ಕಳುಹಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net