

ಚೆಸ್ ವಿಶ್ವಕಪ್ ಫೈನಲ್ ಪ್ರಜ್ಞಾನಂದ-ಕಾರ್ಲ್‌ಸೆನ್ ಸಮಬಲ
ಬಾಕು (ಅಜರ್ ಬೈಜಾನ್): ಭಾರತ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ೈನಲ್ ಮೊದಲ ಪಂದ್ಯದಲ್ಲಿ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಎದುರು ಡ್ರಾ ಸಾಧಿಸಿದ್ದಾರೆ. ಬುಧವಾರ ಈ ಮುಖಾಮುಖಿಯ 2ನೇ ಪಂದ್ಯ ನಡೆಯಲಿದ್ದು, ಅದರಲ್ಲಿ ಗೆದ್ದರೆ ಪ್ರಜ್ಞಾನಂದ ಚಾಂಪಿಯನ್ ಎನಿಸಲಿದ್ದಾರೆ. 2ನೇ ಪಂದ್ಯವೂ ಡ್ರಾಗೊಂಡರೆ ವಿಜೇತರ ನಿರ್ಣಯಕ್ಕೆ ಗುರುವಾರ ಟೈಬ್ರೇಕರ್ ಕಾದಾಟ ನಡೆಯಲಿದೆ.
ಟೂರ್ನಿಯ ಉಪಾಂತ್ಯದಲ್ಲಿ ಆಡುತ್ತಿರುವ ಅತಿ ಕಿರಿಯ ಆಟಗಾರ ಎನಿಸಿರುವ 18 ವರ್ಷದ ಪ್ರಜ್ಞಾನಂದ,ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ 32 ವರ್ಷದ, ಮ್ಯಾಗ್ನಸ್ ಕಾರ್ಲ್‌ಸೆನ್‌ಗೆ ನಿಕಟ ಪೈಪೋಟಿ ನೀಡಿದರು. ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದ ಪ್ರಜ್ಞಾನಂದ 35ನೇ ನಡೆಯ ಬಳಿಕ ಅಂಕ ಹಂಚಿಕೊಂಡರು.
ಮೂರನೇ ಸ್ಥಾನಕ್ಕಾಗಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ದೇಶದ ನಿಜತ್ ಅಬಸೋವ್ ಮೊದಲ ಸುತ್ತಿನಲ್ಲಿ ವಿಶ್ವ ನಂ.3 ್ಯಾಬಿಯಾನೊ ಕರುವಾನಾ ಎದುರು ಮುನ್ನಡೆ ಸಾಧಿಸಿದ್ದಾರೆ. ಚೆಸ್ ವಿಶ್ವಕಪ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ಆಟಗಾರರು ಕ್ಯಾಂಡಿಡೇಟ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.