

Saina Nehwal Divorce : ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನ್ ನೆಹ್ವಾಲ್ ತನ್ನ ಪತಿ ಪರುಪಲ್ಲಿ ಕಶ್ಯಪ್ ಅವರಿಂದ ಬೇರ್ಪಡುವುದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದ ಬೆನ್ನಲ್ಲೇ ಇವರ ಪತಿ ಕೂಡಾ ತಮ್ಮ ಇನ್ಸ್ಟಾ ಖಾತೆಯಲ್ಲಿ ನೇರವಾಗಿ ವಿಚ್ಚೇದನ ವಿಷಯವನ್ನು ತಿಳಿಸದೆ ಈ ತೀಮಾರ್ನದಿಂದ ಸಂತೋಷವಾಗಿರುವುದಾಗಿ ಕಂಡು ಬಂದಿದೆ.
ಭಾನುವಾರ ರಾತ್ರಿ ಸೈನಾ ನೆಹ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ, ಕಶ್ಯಪ್ ಮತ್ತು ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ವೈಯಕ್ತಿಕ ಶಾಂತಿ, ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈ ನಿರ್ಧಾರ ಸುಲಭವಾಗಿರಲಿಲ್ಲ ಆದರೆ ಅದು ಅಗತ್ಯವೆಂದು ನಾವು ಭಾವಿಸಿದ್ದೇವೆ. ನಾವು ಹಿಂದಿನದಕ್ಕೆ ಪರಸ್ಪರ ಧನ್ಯವಾದ ಹೇಳುತ್ತೇವೆ ಮತ್ತು ಭವಿಷ್ಯದ ಪ್ರಯಾಣಕ್ಕಾಗಿ ಪರಸ್ಪರ ಶುಭ ಹಾರೈಸುತ್ತೇವೆ. ನಮಗೆ ಗೌಪ್ಯತೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಅವರು ಹೇಳಿದರು.
ಸೈನಾ ನೆಹ್ವಾಲ್ ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದ್ದಂತೆ ಇತ್ತ ಕಶ್ಯಪ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಕೂಡಾ ಸುದ್ದಿಯಾಗಿದೆ.
ಪರುಪಲ್ಲಿ ಕಶ್ಯಪ್ ಅವರು, ಜುಲೈ 11 ರಿಂದ 13 ರವರೆಗೆ ನೆದರ್ಲ್ಯಾಂಡ್ನಲ್ಲಿ ನಡೆಯುವ (Awakening festival)ನಲ್ಲಿ ತಮ್ಮ ಸ್ನೇಹಿತರೊಂದಿಗೆ ಭಾಗಿಯಾಗಿರುವ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೈನ್ ನೆಹ್ವಾಲ್ ತನ್ನ ಪತಿ ಪರುಪಲ್ಲಿ ಕಶ್ಯಪ್ ಅವರು ವಿಚ್ಚೇದನ ನಂತರ ಇಬ್ಬರು ಹಂಚಿಕೊಂಡಿದ್ದ ಪೋಸ್ಟ್ ನೋಡುತ್ತಿದ್ದರೆ ಇಬ್ಬರು ತಮ್ಮ ಬೇರ್ಪಡುವಿಕೆ ನಂತರ ಕೂಡಾ ಸಂತೋಷವಾಗಿರುವುದಾರೆ ಎನ್ನುವುದು ತಿಳಿದು ಬರುತ್ತದೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸೈನಾ ಮತ್ತು ಕಶ್ಯಪ್ ಇಬ್ಬರೂ ಹೈದರಾಬಾದ್‌ನ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ತರಬೇತಿ ಪಡೆದರು. ಸೈನಾ ಒಲಿಂಪಿಕ್ ಕಂಚು ಗೆದ್ದು ವಿಶ್ವ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಿದರು, ಕಶ್ಯಪ್ 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು. ಕಶ್ಯಪ್ 2024 ರ ಆರಂಭದಲ್ಲಿ ತಮ್ಮ ಕ್ರೀಡಾ ವೃತ್ತಿಜೀವನವನ್ನು ಕೊನೆಗೊಳಿಸಿ ಕೋಚಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದರು. ಭಾರತೀಯ ಬ್ಯಾಡ್ಮಿಂಟನ್ ಅಭಿವೃದ್ಧಿಯಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದರು.
ಇಬ್ಬರೂ ಡಿಸೆಂಬರ್ 14, 2018 ರಂದು ವಿವಾಹವಾದರು. ಭಾರತದ ಇತಿಹಾಸದಲ್ಲಿ ಬಹು ದಾಖಲೆಗಳನ್ನು ಹೊಂದಿರುವ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವುದು, ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ತಲುಪುವುದು ಮತ್ತು ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲುವಂತಹ ಸಾಧನೆಗಳೊಂದಿಗೆ ಅವರು ಭಾರತೀಯ ಬ್ಯಾಡ್ಮಿಂಟನ್‌ಗೆ ಜಾಗತಿಕ ಮನ್ನಣೆ ತಂದುಕೊಟ್ಟರು. ಈಗ ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವ ಈ ನಿರ್ಧಾರವು ಸೈನಾ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿದೆ.