ಬೆಂಗಳೂರಿನಲ್ಲಿ ಹಿರಿಯರ ಹಬ್ಬ, ಸಮ್ಮಿಲನ; ದಿನಪೂರ್ತಿ ಮೋಜು ಮಸ್ತಿ

Senior
Published on

ಬೆಂಗಳೂರು: ಜೀವನದಲ್ಲಿ ಅಪಾರ ಅನುಭವ ಪಡೆದು ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗಾಗಿ ಸೇಂಟ್ ಜೋಸೆಫ್ ಆಫ್ ಇನ್‌ಸ್ಟಿಟ್ಯೂಟ್ ಮೈದಾನದಲ್ಲಿ ‘ಹಿರಿಯರ ಹಬ್ಬ’ ಆಯೋಜಿಸಲಾಗಿತ್ತು.

ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಂಬ ಕೊರಗಿನಿಂದ ಹಿರಿಯರು ದೂರ ಸರಿದು ಇಡೀ ದಿನ ಸಂತೋಷವಾಗಿ ಕುಣಿದು ಕುಪ್ಪಳಿಸಿ, ಮೋಜು-ಮಸ್ತಿ ಮಾಡಬೇಕೆಂದು ವಯ್ಹ ವಿಕಾಸ್ ಸಂಸ್ಥೆ ಈ ಹಬ್ಬವನ್ನು ಆಯೋಜಿಸಿತ್ತು.

ಬೆಳಗ್ಗೆಯಿಂದ ಹಿರಿಯರಿಗಾಗಿ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ವಯ್ಹ ವಿಕಾಸ್ ಸಂಸ್ಥೆಯ ಸಿಇಒಗಳಾದ ಜಮುನಾ ರವಿ, ಹಿಮಾಂಶು ಜೈನ್ ಮತ್ತು ಪವಿತ್ರ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಿರಿಯರ ಹಬ್ಬದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಹಿರಿಯ ನಾಗರೀಕರು ಪಾಲ್ಗೊಂಡಿದ್ದರು. ಹಲವು ನಿವೃತ್ತ ಐಎಎಸ್, ಐಪಿಎಸ್, ಉನ್ನತಾಧಿಕಾರಿಗಳು, ಜನ ಸಾಮಾನ್ಯರು ಒಳಗೊಂಡಂತೆ ಎಲ್ಲಾ ರೀತಿಯ ಜನ ಸಮೂಹ ಹಬ್ಬದಲ್ಲಿ ಪರಸ್ಪರ ಸಮ್ಮಿಲನಗೊಂಡು ಸಂತೋಷಪಟ್ಟರು. ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ, ಪ್ರಣಯರಾಜ ಶ್ರೀನಾಥ್, ಸಿಹಿ ಕಹಿ ಚಂದ್ರು ಮತ್ತಿತರು ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ವೇಷಭೂಷಣಗಳ ಫ್ಯಾಶನ್ ಶೋ, ಉತ್ತರ, ದಕ್ಷಿಣ ಭಾರತೀಯ ತಿಂಡಿ, ತಿನಿಸುಗಳು, ಕ್ರೀಡಾಕೂಟ, ವಿವಿಧ ವಿಚಾರಗೋಷ್ಠಿ, ಆರೋಗ್ಯ ತಪಾಸಣೆ, ಸಂಗೀತ ಸೇರಿದಂತೆ ಹಲವು ಮನೋರಂಜನಾ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net