ನಾಲ್ವರು ಸಾಧಕರಿಗೆ ಅಭಿನಂದನೆ: ಅಶಕ್ತ ಕಲಾವಿದರಿಗೆ ಸಹಾಯಹಸ್ತ ಯಕ್ಷಗಾನ ಬಯಲಾಟ ಸಂಪನ್ನ

Mbd_Yakshagana
Published on

ಮೂಡುಬಿದಿರೆ: ಯಕ್ಷಮಿತ್ರರು ಮೂಡುಬಿದಿರೆ, ಬೆದ್ರ ಬಸ್ ಸ್ಟ್ಯಾಂಡ್ ಫ್ರೆಂಡ್ಸ್ ವತಿಯಿಂದ ಯಕ್ಷರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ ಅವರಿಗೆ ಅಭಿನಂದನೆ, ಅಶಕ್ತ ಕಲಾವಿದರಿಗೆ ಸಹಾಯಹಸ್ತ , ಸಾಧಕರಿಗೆ ಅಭಿನಂದನೆ, ಯಕ್ಷಗಾನ ಬಯಲಾಟ ಕನ್ನಡಭವನದಲ್ಲಿ ನಡೆಯಿತು.

ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್ ಉದ್ಘಾಟಿಸಿದರು. ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಯಜಮಾನ ಗೋವಿಂದ ಭಟ್ ನಿಡ್ಲೆ ಮಾತನಾಡಿದರು.

ಅಭಿನಂದನೆ

ಯಕ್ಷ ರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ, ಹಿರಿಯ ಪೌರ ಕಾರ್ಮಿಕ ಬೊಗ್ಗು, ಸಮಾಜ ಸೇವಕರಾದ ಅನಿಲ್ ಮೆಂಡೋನ್ಸ, ಯಾಜ್ ಮಾಡೂರು ಅವರನ್ನು ಅಭಿನಂದಿಸಲಾಯಿತು. ಯಕ್ಷಗಾನ ನಾಗಸಿರಿ ಪ್ರಸಂಗ ಕರ್ತೃ ಗಣೇಶ್ ಬಿ.ಅಳಿಯೂರು, ಭಾಗವತ ಕರುಣಾಕರ ಶೆಟ್ಟಿ ಕಾಶಿಪಟ್ಣ, ಕುಮಾರ್ ಮಾಸ್ತಿಕಟ್ಟೆ ಅವರನ್ನು ಗೌರವಿಸಲಾಯಿತು.

ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮುಖಂಡ ಕೆ.ಅಶ್ವಥ್ ಪಣಪಿಲ, ಮೂಡ ಸದಸ್ಯ ಶೇಖರ ಪೂಜಾರಿ, ಉದ್ಯಮಿ ಇರ್ಫಾನ್, ಭಾಗವತರಾದ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಜ್ಯೋತಿಷಿ ಸುಧಾಕರ ತಂತ್ರಿ ಉಪಸ್ಥಿತರಿದ್ದರು. ಆಯೋಜಕ ಹರೀಶ್ ದೇವಾಡಿಗ, ನಾಗೇಶ್ ಬಂಗೇರ ಉಪಸ್ಥಿತರಿದ್ದರು. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಅತಿಥಿ ಕಲಾವಿದರಿಂದ ನಾಗಸಿರಿ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net