ಊರ ಶಾಲೆಗಳಲ್ಲಿ ಕಲಿತ ಸೈನಿಕರಿಂದ ದೇಶ ರಕ್ಷಣೆ: ಗಣೇಶ್ ಕಾರ್ಣಿಕ್ ವಿಶ್ಲೇಷಣೆ : ನಿವೃತ್ತ ಯೋಧ ವಿಕ್ರಮ್ ಜೆ.ಎನ್‌ಗೆ ಅಭಿನಂದನೆ

yodha
ಅಭಿನಂದನಾ ಕಾರ್ಯಕ್ರಮದಲ್ಲಿ ಯೋಧ ವಿಕ್ರಂ ಜೆ.ಎನ್ ಮಾತನಾಡಿದರು. ನಿವೃತ್ತ ಯೋಧ ಗಣೇಶ್ ಕಾರ್ನಿಕ್, ಮೇಜರ್ ಜನರಲ್ ಎಂ.ವಿ ಭಟ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭೂ ಸೇನೆಯಲ್ಲಿ 20 ವರ್ಷ ಸೇವೆಗೈದು ನಿವೃತ್ತಿ ಹೊಂದಿ ಊರಿಗೆ ಆಗಮಿಸಿದ ನ್ಯಾಯತರ್ಪು ಗ್ರಾಮದ ವಂಜಾರೆಯ ಯೋಧ ವಿಕ್ರಂ ಜೆ.ಎನ್ ಅವರಿಗೆ ಅಭಿನಂದನೆ ಬುಧವಾರ ಗೇರುಕಟ್ಟೆ ಸಹಕಾರಿ ಭವನದಲ್ಲಿ ನಡೆಯಿತು.

ನಿವೃತ್ತ ಯೋಧ ಗಣೇಶ್ ಕಾರ್ಣಿಕ್ ಮಾತನಾಡಿ, ಸೈನ್ಯದಲ್ಲಿ ಇರುವರು ಸಣ್ಣ-ಸಣ್ಣ ಶಾಲೆಯಲ್ಲಿ ಓದಿ ಸೈನಿಕರಾದವರು. ಸೈನಿಕರು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧರಿರುತ್ತಾರೆ. ಪ್ರತಿಯೊಬ್ಬರಿಗೂ ದೇಶದ ಮೇಲೆ ಅಭಿಮಾನ ಇರಬೇಕು ಎಂದರು.

ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಮೇಜರ್ ಜನರಲ್ ಎಂ.ವಿ ಭಟ್ ಮಾತನಾಡಿ, ನಾವು ದೇಶಕ್ಕೆ ಒಳಿತನ್ನು ಬಯಸಬೇಕು. ಪ್ರಾಣದ ಭಯ ಬಿಟ್ಟು ಕೆಲಸ ಮಾಡುವವರು ಸೈನಿಕರು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಲಕ್ಷ್ಮಣ ಶೆಟ್ಟಿ, ಮಾವಿನಕಟ್ಟೆ ಸಂತ ಅನ್ನಾವರ ಚರ್ಚ್‌ನ ಫಾದರ್ ಬೆರ್ನಾಡ್, ನಿವೃತ್ತ ಸೈನಿಕ ಬೆಟ್ಟೆ ಗೌಡ ಮಾತನಾಡಿದರು.

ಕಳಿಯ ಗ್ರಾಪಂ, ಕಳಿಯ ಸೊಸೈಟಿ, ಕಳಿಯ ಹಾಲು ಉತ್ಪಾದಕರ ಸಂಘ, ಕಳಿಯ, ನ್ಯಾಯತರ್ಪು, ಓಡಿಲ್ನಾಳ ಅಭಿನಂದನಾ ಸಮಿತಿಗಳಿಂದ ಯೋಧ ವಿಕ್ರಂ ಜೆ.ಎನ್ ದಂಪತಿಯನ್ನು ಗೌರವಿಸಲಾಯಿತು.

ಕಳಿಯ ಗ್ರಾಪಂ ಅಧ್ಯಕ್ಷ ದಿವಾಕರ್ ಎಂ, ಬೆಳ್ತಂಗಡಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ವಿಕ್ರಮ್ ಅವರ ತಂದೆ ಜನಾರ್ದನ ಪೂಜಾರಿ, ತಾಯಿ ನಾಗವೇಣಿ ಮೊದಲಾದವರು ಉಪಸ್ಥಿತರಿದ್ದರು.

ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಆರ್.ಎನ್ ಸ್ವಾಗತಿಸಿದರು., ನೇವಿಲ್ ಸ್ಟಿವನ್ ಮೋರಸ್ ವಂದಿಸಿದರು.

ತಂದೆಗೆ ಯೋಧನಾಗಬೇಕೆಂಬ ಕನಸಿತ್ತು. ಆದರೆ ಸಾಧ್ಯವಾಗಿರಲ್ಲಿಲ್ಲ. ಆದ್ದರಿಂದ ನನಗೆ ಪ್ರೇರಣೆ ನೀಡಿ ಪರಿಚಯಸ್ಥರ ಬಳಿ ತರಬೇತಿ ಕೊಡಿಸಿ ಸುಲಭದಲ್ಲಿ ಆಯ್ಕೆ ಆಗುವಂತೆ ಮಾಡಿದರು. ಕಾಶ್ಮೀರದಲ್ಲಿ 2 ವರ್ಷ ಭಯೋತ್ಪಾದನೆ ಸದೆ ಬಡಿಯುವ ಕೆಲಸ ಮಾಡಿದ್ದೆ. ಹೀಗೆ ಅನೇಕ ಗಡಿಗಳಲ್ಲಿ 20 ವರ್ಷ ಸೇವೆ ಮಾಡಲು ಅವಕಾಶ ಸಿಕ್ಕಿತ್ತು. - ವಿಕ್ರಂ ಜೆ.ಎನ್, ನಿವೃತ್ತ ಯೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net