More

    ‘ರಶೀದ್​ಖಾನ್​ ನೀವ್​.. ಮುಚ್ಕೊಳ್ಳಿ’: ಅಫ್ಘಾನ್ ವೇಗಿ ಫಾರೂಕಿ ಕಾಮೆಂಟ್ ವೈರಲ್!

    ಕಾಬೂಲ್​: ಅಫ್ಘಾನಿಸ್ತಾನವು ಪಾಪುವಾ ನ್ಯೂಗಿನಿ ವಿರುದ್ಧ ಅಮೋಘ ಜಯದೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಹಂತವನ್ನು ತಲುಪಿತು. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಫಜಲ್ ಹಕ್ ಫಾರೂಕಿ ‘ಪಂದ್ಯದ ಆಟಗಾರ’ ಪ್ರಶಸ್ತಿ ಪಡೆದರು. ಪಂದ್ಯದ ನಂತರ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್ ಜೊತೆ ಫಾರೂಕಿ ಮಾತನಾಡಿದರು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರನ್ನು ಫಾರೂಕಿ ‘ಶಟಪ್’ ಎಂದು ಸಂಬೋಧಿಸಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.

    ಇದನ್ನೂ ಓದಿ: ರೇವ್​ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಜೈಲ್​ನಿಂದ ರಿಲೀಸ್!

    ಇದೇನಿದು? ಕ್ಯಾಪ್ಟನ್​ನನ್ನು ಆಟಗಾರ ಹೀಗೆಂದಿದ್ದು ಸರಿಯೇ ಎಂದು ಎಂಥವರೂ ಯೋಚಿಸಬಹುದು. ಆದರೆ, ಇಲ್ಲಿ ಫಾರೂಕಿ ತಮಾಷೆಯಾಗಿ ಹೇಳಿದ್ದಾರೆ. ನಿಜವಾಗಿ ಏನಾಯಿತು ಎಂಬುದನ್ನು ನೋಡೋಣ..

    ನ್ಯೂಗಿನಿ ವಿರುದ್ಧದ ತನ್ನ ಪ್ರದರ್ಶನ ಹೇಗಿತ್ತು ಎಂಬುದನ್ನು ಫಾರೂಕಿ ವಿವರಿಸುತ್ತಾರೆ. ಅದೇ ಸಮಯದಲ್ಲಿ ಬಿಷಪ್​-ಫಾರೂಕಿ ಸಂಭಾಷಣೆಗೆ ಭಂಗ ತರಲು ರಶೀದ್ ಖಾನ್ ಮಧ್ಯೆ ಬರುತ್ತಾನೆ. ಫಾರೂಕಿಯನ್ನು ನಗಿಸಲು ಆತ ಹಾಗೆ ಮಾಡುತ್ತಾನೆ. ಆಗ ಫಾರೂಕಿ, ‘ನೀವು ಬಾಯಿ ಮುಚ್ಚಿಕೊಳ್ಳಿ’ ಎಂದು ಹೇಳಿದ್ದು, ಪಕ್ಕದಲ್ಲಿದ್ದ ಬಿಷಪ್ ತಕ್ಷಣ ಪ್ರತಿಕ್ರಿಯಿಸಿದ್ದಾರೆ.

    ರಶೀದ್​ ನನ್ನನ್ನು ನಗಿಸಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ನಗುವುದಿಲ್ಲ ಎಂದು ಫಾರೂಕಿ ಹೇಳಿದ್ದಾರೆ. (ಇದನ್ನೂ ನಗುತ್ತಲೇ ಹೇಳಿರುವುದು ಗಮನಾರ್ಹ)

    ನಂತರ ಫಾರೂಕಿ ತನ್ನ ಆಟದ ಬಗ್ಗೆ ಮಾತನಾಡುವುದನ್ನು ಮುಂದುವರೆಸಿದರು. “ಮೊದಲು ಅಫ್ಘಾನಿಸ್ತಾನದ ಜನತೆಗೆ ಅಭಿನಂದನೆಗಳು. ನಮ್ಮ ತಂಡ ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಗುಣಮಟ್ಟದ ಕ್ರಿಕೆಟ್ ಆಡಿದ್ದರಿಂದ ಇದು ಸಾಧ್ಯವಾಯಿತು ಎಂದಿದ್ದಾರೆ.

    ‘ಆರ್​ಆರ್​ಆರ್​’ ದಾಖಲೆ ಮುರಿದ ‘ಕಲ್ಕಿ’.. ವಿದೇಶದಲ್ಲಿ ಪ್ರೀ-ಬುಕಿಂಗ್​ ಮೊತ್ತ ಕೇಳಿದ್ರೆ ಹೌಹಾರ್ತೀರಾ?

    See also  ಕನ್ನಡಿಗ ಸುನೀಲ್ ಜೋಶಿ ಕೈತಪ್ಪಿದ ಪಟ್ಟ, ಕ್ರಿಕೆಟ್ ಆಯ್ಕೆ ಸಮಿತಿಗೆ ಚೇತನ್ ಶರ್ಮ ಹೊಸ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts