ಅಪ್ಪನೆಂಬ ಅದ್ಭುತ| ಫೇಲಾದಾಗ್ಲೂ ಸ್ವೀಟ್ ಹಂಚಿದ್ದ!

shivaraj
Published on

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು ಸ್ವಲ್ಪ ಮುಂಗೋಪಿ, ಎಲ್ಲದರಲ್ಲೂ ಗಡಿಬಿಡಿ ಮಾಡುವ ಸ್ವಭಾವ. ಹಾಗಾಗಿ ಯಾವಾಗಲೂ ಗಡಬಡ ಮಾಡಬ್ಯಾಡ ತಾಳಬೇಕು ಅಂತ ಹೇಳುವ ನಮ್ಮ ಅಪ್ಪ ಮರೆಯಾಗಿ ಹೋಗಿ ಕೇವಲ ಮೂರು ತಿಂಗಳಾದರೂ ನನಗೆ ಮೂರು ವರ್ಷಗಳಾಗಿವೆ ಎನ್ನುವ ಅಪ್ಪನ ಅನುಪಸ್ಥಿತಿಯ ಆತ್ಮಸ್ಥೈರ್ಯ ಕಾಡುತ್ತಿದೆ. ಮಂದಿ ಮುಂದೆ ಹೊಗಳದಿದ್ದರೂ ಹಿಂದೆ ನನ್ನ ಕಾಳಜಿ ಮಾಡುತ್ತಿದ. ನಾನು ಹತ್ತನೇ ತರಗತಿಯಲ್ಲಿ ಫೇಲ್ ಆದ್ರೂ ನಮ್ಮ ಗ್ರಾಮದ ಶ್ರೀ ಹನುಮಾನ್ ದೇವಾಲಯ ಭಜನೆ ವೇಳೆ ನೂರಾರು ಮಂದಿಗೆ ಶೀರಾ,ಉಪ್ಪಿಟ್ಟು ಹಂಚಿದ್ದ! ಯಾವುದೇ ಸ್ಪರ್ಧೆ ಆಗಲಿ, ಕೆಲಸದಲ್ಲಿ ಆಗಲಿ ಗೆದ್ದಾಗ ದೂರದಿಂದ ನೋಡಿ ಮುಗುಳನಗೆ ಬೀರುತ್ತಾ ನಮ್ಮ ನಿಜವಾದ ಬೆಳವಣಿಗೆ ಕಂಡು ಖುಷಿ ಪಟ್ಟಿದ್ದ ವ್ಯಕ್ತಿ ನನ್ನಪ್ಪ ಅವರೇ ಅಂಡಗಿ ಶಿವಶರಣಪ್ಪ. ಅವರು ಹೋದ ಮೇಲೆ ಈಗಲೂ ನಮ್ಮೂರ ಜನ ಸಿಕ್ರೆ, ನಿಮ್ಮಪ್ಪ ಬಹಳ ಕಾಳಜಿ ಮನುಷ್ಯಾ ರೀ, ನಮಗ ಬಹಳ ಬೈಯುತ್ತಿದ್ದರೀ ಎಂದು ಬಹಳ ಖುಷಿಯಿಂದ ಹೇಳುವುದೇ ಅವರ ಬೈಗುಳದ ಹಿಂದಿದ್ದ ಸಾಮಾಜಿಕ ಕಳಕಳಿ ತೋರಿಸ್ತದೆ. ಅವರ ಅನುಪಸ್ಥಿತಿಯಲ್ಲಿ ಈಗ ನಮಗೆ ಮನವರಿಕೆಯಾಗುತ್ತಿದೆ. | ಶಿವರಾಜ ಶಿವಶರಣಪ್ಪಾ ಅಂಡಗಿ ಕರ್ನಾಟಕ ಕೃಷಿಕ ಸಮಾಜ ಸದಸ್ಯ, ಟೇಂಗಳಿ ಕಾಳಗಿ, ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net