

ಇಂದು ವಿಶ್ವ ಅಪ್ಪಂದಿರ ದಿನ. ಆ ನಿಮಿತ್ತ ಇಡೀ ವಿಶ್ವ ಅಪ್ಪನಿಗೆ ನಮನ ಸಲ್ಲಿಸುತ್ತಿದೆ. ಅದರಲ್ಲೂ ಸಿನಿಮಾ ಮಂದಿ ಅಪ್ಪನ ಜತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು, ಅಪ್ಪನ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಬಾಲಿವುಡ್ನ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು, ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲ ಸಿನಿಮಾ ಇಂಡಸ್ಟ್ರಿಗಳ ಕಲಾವಿದರು ತಮ್ಮ ಮೊದಲ ರೋಲ್ ಮಾಡೆಲ್ನ ಫೋಟೋ ಹಮಚಿಕೊಂಡಿದ್ದಾರೆ. ಆ ಫೋಟೋ ಮೂಲಕ ಮತ್ತೊಮ್ಮೆ ಮಗದೊಮ್ಮೆ ಅಪ್ಪನನ್ನು ನೆನಪು ಮಾಡಿಕೊಂಡಿದ್ದಾರೆ. ಅಂಥ ಕೆಲ ಸೆಲೆಬ್ರಿಟಿಗಳ ಅಪ್ಪಂದಿರ ಅಪರೂಪದ ಫೋಟೋಗಳು ಇಲ್ಲಿವೆ.