ಪುತ್ರಿಯ ಮೇಲೆ ಲೈಂಗಿಕ ಕಿರುಕುಳ ತಂದೆಗೆ ಜೈಲು ಶಿಕ್ಷೆ; ತಂದೆ ಮಾಡಿದ ಅಪರಾಧ ಏನು..!

highcourt
Published on

ಬೆಂಗಳೂರು: ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ ಎಫ್ ಟಿಎಸ್ ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಕಸಬಾ ಹೋಬಳಿ ರಾಜಘಟ್ಟ ಗ್ರಾಮದ 40 ವರ್ಷದ ತಂದೆ ಅಪರಾಧಿ. 5 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಟಿ.ಸಿ. ಶ್ರೀಕಾಂತ್ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎ.ಚಂದ್ರಕಲಾ, ವಾದ ಮಂಡಿಸಿದ್ದರು.

ಅಪರಾಧಿ ತಂದೆ, ತನ್ನ ಪುತ್ರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪಕ್ಕದಲ್ಲಿ ಮಲಗುವಂತೆ ಒತ್ತಾಯ ಮಾಡುತ್ತಿದ್ದ. ಅದಕ್ಕೆ ಬಾಲಕಿ ನಿರಾಕರಿಸಿದಾಗ ನಿನ್ನ ಮತ್ತು ನಿನ್ನ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಮಗಳನ್ನು ಪಕ್ಕದಲ್ಲಿ ಮಲಗಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಕೊನೆಗೊಂದು ದಿನ ಪತ್ನಿ, ತನ್ನ ಪತಿಯ ದುಷ್ಕೃತ್ಯ ಗಮನಿಸಿ ದೊಡ್ಡಬಳ್ಳಾಪುರ ಠಾಣೆಗೆ ದೂರು ಸಲ್ಲಿಸಿದ್ದಳು.

ಪ್ರಕರಣ ದಾಖಲಿಸಕೊಂಡ ತನಿಖಾಧಿಕಾರಿ, ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಸಲಿಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net