ಸೊಸೆಯ ಕತ್ತು ಸೀಳಿ ಕೊಲೆ ಮಾಡಿದ ಮಾವ: ಕಾರಣ ಕೇಳಿದ್ರೆ ಶಾಕ್​! |kills Her

crime
Published on

kills Her: ಮಾವನೊಬ್ಬ ತನ್ನ ಸೊಸೆಯ ಕತ್ತಿಯಿಂದ ಕತ್ತು ಸೀಳಿ ಕೊಲೆ ಮಾಡಿರುವ ಭಯಾನಕ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ತಕ್ಷಣ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಜಮುಯಿ ಜಿಲ್ಲೆ ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಈತಸಾಗರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ, ಖೇಲನ್ ಮಾಂಝಿ ಎಂಬ ವ್ಯಕ್ತಿ ತನ್ನ ಸೊಸೆ(ಖುಷ್ಬೂ ದೇವಿ) ಮನೆಕೆಲಸ ಮಾಡುತ್ತಿದ್ದಾಗ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಕುತ್ತಿಗೆಗೆ ಬಿದ್ದ ಮಾರಕ ಪೆಟ್ಟಿನಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.

ಖುಷ್ಬೂ ದೇವಿ ಅವರು ಖೇಲನ್ ಮಾಂಝಿ ಅವರ ಮಗ ರಮಣ್ ಮಾಂಝಿ ಅವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಬ್ಬ ಚಿಕ್ಕ ಮಗನೂ ಇದ್ದಾನೆ. ವರದಿಗಳ ಪ್ರಕಾರ, ಘಟನೆ ನಡೆಯುವ ಮೊದಲು ಯಾವುದೇ ವಾದ ಅಥವಾ ಜಗಳದ ಲಕ್ಷಣಗಳು ಕಂಡುಬಂದಿಲ್ಲ ಎನ್ನಲಾಗಿದೆ. ಆದರೆ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಉಂಟಾಗಬಹುದೆಂದು ಅಂದಾಜಿಸಲಾಗಿದೆ.

ಈ ಭೀಕರ ಹತ್ಯೆ ಇಡೀ ಮನೆ ಮತ್ತು ಗ್ರಾಮವನ್ನು ಸಂಘಕ್ಕೀಡು ಮಾಡಿತು. ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಕೊಲೆಗೆ ಬಳಸಲಾದ ಕತ್ತಿಯನ್ನು ಅಪರಾಧ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖುಷ್ಬೂ ದೇವಿಯ ಮೃತದೇಹವನ್ನು ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕೊಲೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಪ್ರಾಥಮಿಕ ತನಿಖೆಗಳು ಇದು ಕೌಟುಂಬಿಕ ಕಲಹದಿಂದ ಉಂಟಾಗಬಹುದೆಂದು ಸೂಚಿಸುತ್ತವೆ ಎಂದು ಪೊಲೀಸರು ಶಂಕಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net