ಮೈಸೂರು: ( Mysore ) ತಂದೆಯಾದ ಸಂತೋಷದಲ್ಲಿಯೇ ಇದ್ದ ವ್ಯಕ್ತಿ ಮಗು ಹುಟ್ಟಿದ ಮರುದಿನವೇ ಆಸ್ಪತ್ರೆಯ ಎದುರು ನಿಧನರಾಗಿದ್ದಾರೆ. ಮೈಸೂರಿನಲ್ಲಿ ಒಂದು ದುರಂತ ಘಟನೆ ನಡೆದಿದೆ.
ನಾಗೇಶ್ (47) ಮೃತ ದುರ್ದೈವಿ . ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ನಾಗೇಶ್ ಹೆರಿಗೆಗೆ ಅಂತ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು.
ನಾಗೇಶ್ ಪತ್ನಿಯ ಆರೈಕೆಗಾಗಿ ಕಳೆದ ಐದಾರು ದಿನಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ನಾಗೇಶ್ ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದರು.
ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ನಾಗೇಶ್ ಮೃತಪಟ್ಟಿರುವುದು ತಿಳಿದಿದೆ. ಮಗು ಜನಿಸಿದ ಮರುದಿವೇ …. ತಂದೆಯಾದ ಖುಷಿಯಲ್ಲಿಯೇ ನಾಗೇಶ್ ಬಾರದ ಲೋಕಕ್ಕೆ ತೆರಳಿದ್ದಾರೆ.
TAGGED:Mysore