ರೆಟ್ರೋ ವಾಚ್‌…ಬರೀ ಸಮಯ ನೋಡಲು ಮಾತ್ರವಲ್ಲ, ಫ್ಯಾಷನ್​​​​​ಗೂ ಬೆಸ್ಟ್

watch
Published on

ವಾಚ್ ವರ್ಸಟೈಲ್ ಆಕ್ಸೆಸರಿ. ಗುಡ್ ಔಟ್‌ಫಿಟ್ ಡ್ರೆಸ್ ಮತ್ತು ಅಕೇಶನ್‌ಗೆ ಹೇಳಿ ಮಾಡಿಸಿದ ಅಲಂಕಾರಿಕ ಸಾಧನ. ನಿಮ್ಮ ಸ್ಟೈಲ್ ಮತ್ತು ಮೂಡ್ ತಿಳಿಯಲು ಇರುವ ಏಕೈಕ ಉಪಕರಣ ಅಂದರೆ ಅದು ವಾಚ್ ಮಾತ್ರ. ಅನೇಕರಿಗೆ ವಾಚ್‌ನ ಮಾಂತ್ರಿಕತೆ ತಿಳಿದಿಲ್ಲ. ಸಮಯ ತೋರಿಸುವ ಉಪಕರಣ ಎಂದಷ್ಟೇ ತಿಳಿದಿದ್ದಾರೆ. ಆದರೆ ಸಮಯಕ್ಕೆ ಎಷ್ಟು ಮಹತ್ವ ಕೊಡುತ್ತೇವೆಯೋ ವಾಚ್ ಬಗ್ಗೆಯೂ ಅಷ್ಟೇ ಗಮನವಿರಲಿ ಎನ್ನುತ್ತಾರೆ ಫ್ಯಾಷನ್ ಪ್ರಿಯರು.

ಪುರಾತನ ಶೈಲಿಯ ಪರಿಕರಗಳೇ ಇಂದು ವಿನೂತನ ರೀತಿಯಲ್ಲಿ ಮಾರ್ಪಡಾಗುತ್ತಿರುವ ಯುಗವಿದು. ಅಂದ ಮೇಲೆ ವಾಚ್‌ನಲ್ಲಿಯೂ ಸ್ವಲ್ಪ ಬದಲಾವಣೆ ಆಗಿರಬೇಕಲ್ಲ. ಖಂಡಿತವಾಗಿ ಆಗಿದೆ. ರೆಟ್ರೋ ವಾಚ್‌ಗಳು ಇಂದು ಟ್ರೆಂಡಿಯಾಗಿ ಪ್ರತಿಯೊಬ್ಬರ ಕೈನಲ್ಲಿ ಮೆರೆಯುತ್ತಿವೆ. ವಾಚ್‌ಗಳನ್ನ ನೋಡಿದಾಕ್ಷಣ ನಿಮಗೆ ನೆನಪಾಗುವುದು ಹಳೆಯ ಕಾಲದ ಗತ ವೈಭವ-ಘನತೆ. ಯಾಕಂದ್ರೆ ಇದರಲ್ಲಿರುವ ಯುನಿಕ್ ಡಿಸೈನ್, ಕಂಬೈನ್ ಎಲಿಮೆಂಟ್ಸ್ ನೋಡಿದರೆ ನೋಡುತ್ತಲೇ ಇರಬೇಕೆನ್ನುವ ಆಸೆ ಹೆಚ್ಚುತ್ತದೆ.

ಎಲಿಗಂಟ್, ಕ್ಲಾಸಿ ರೆಟ್ರೋ ವಾಚ್‌ಗೆ ಸರಿಸಾಟಿ ಇನ್ನೊಂದಿಲ್ಲ. ಮಾರುಕಟ್ಟೆಯಲ್ಲಿ ಇತ್ತೀಚೆಗೆ ಫನ್, ಕ್ವಿರ್ಕಿ, ಫ್ಯಾಷನಬಲ್ ರೆಟ್ರೋ ವಾಚ್‌ಗಳ ಆಗಮನವಾಗಿದ್ದು, ಹಲವಾರು ಬ್ರಾಂಡ್‌ಗಳು ರೆಟ್ರೋ ವಾಚ್‌ಗಳನ್ನು ಡಿಫರೆಂಟ್ ಸ್ಟೈಲ್ಸ್ ಪ್ಯಾಟರ್ನ್ ನಲ್ಲಿ ಬಿಡುಗಡೆ ಮಾಡುತ್ತಿವೆ. ಈ ವಾಚ್‌ಗಳು ಸ್ಟೇಟಸ್ ಸಿಂಬಲ್ ಕೂಡ ಆಗಿರೋದ್ರಿಂದ ಇದನ್ನು ಕೊಳ್ಳಲು ಜನ ಮುಗಿಬೀಳುತ್ತಿರುವುದಂತು ಸುಳ್ಳಲ್ಲ.


ಸೆಲೆಬ್ರಿಟಿಗಳ ಕೈನಲ್ಲಿ ರೆಟ್ರೋ ವಾಚ್
ಹೆಚ್ಚಾಗಿ ರೆಟ್ರೋ ವಾಚ್‌ಗಳನ್ನ ಖರೀದಿಸುತ್ತಿರುವುದು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರು. ಅದಕ್ಕೆ ಕಾರಣವೂ ಇದೆ. ‘ಓಂ ಶಾಂತಿ ಓಂ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್ ಕೈನಲ್ಲಿ, ಅಕ್ಷಯ್ ಕುಮಾರ್-ಐಶ್ವರ್ಯಾ ರೈ ಅಭಿನಯದ ‘ಆ್ಯಕ್ಷನ್ ರಿಪ್ಲೆ' ಸಿನಿಮಾದಲ್ಲಿ, ‘ಅಗ್ನಿಪಥ್’ನಲ್ಲಿ ಹೃತಿಕ್-ಪ್ರಿಯಾಂಕ ಕೈಗಳಲ್ಲಿ ಎಂದು ರೆಟ್ರೋ ವಾಚ್ ನಲಿದಾಡಿತೋ ಅಂದೇ ಅದು ಸಹ ಸ್ಟಾರ್ ಆಗಿ ಮತ್ತೊಮ್ಮೆ ಹೊರಹೊಮ್ಮಿತು. ಸಿನಿಮಾಗಳಲ್ಲಿ ಮೋಡಿ ಮಾಡಿದ ವಾಚ್ ಬಳಿಕ ಪಾರ್ಟಿಗೆ ಬರಲು ಸಾಕಷ್ಟು ಸಮಯವೇನಾಗಲಿಲ್ಲ. ಇಂದಿಗೂ ಬಾಲಿವುಡ್‌ನಲ್ಲಿ ನಡೆಯುವ ಥೀಮ್ ಪಾರ್ಟಿಗಳಲ್ಲಿ ನಟ-ನಟಿಯರ ಕೈಗಳಲ್ಲಿ ನಲಿದಾಡುತ್ತಿರುವುದು ಇವೇ ರೆಟ್ರೋ ವಾಚ್‌ಗಳು...!

ವಾಚ್ ಸ್ಟೈಲ್ ಸ್ಟೇಟ್‌ಮೆಂಟ್ಸ್
1.ಡಿಫರೆಂಟ್ ಪ್ಯಾಟರ್ನ್ ಇರುವ ಸ್ಕಿನಿ ಫಿಟ್ ಡ್ರೆಸ್, ಮೊಣಕಾಲಿನವರೆಗೆ ಉದ್ದವಿರುವ ಸ್ಕರ್ಟ್ ಜೊತೆ ರೆಟ್ರೋ ವಾಚ್ ಡಿಸೈರ್ ಲುಕ್ ಕೊಡುತ್ತದೆ.
2.ಷೀಕ್ ಲುಕ್ ಬೇಕೆಂದರೆ ಮಿನಿಮಮ್ ಸ್ಟೈಲ್ ಇರುವ ಶರ್ಟ್ ಅಥವಾ ಡ್ರೆಸ್, ಆಕ್ಸೆಸರಿ ಹಾಕಿ. ಆಗ ಬೇರೆಯವರು ನಿಮ್ಮನ್ನು ವಾಚ್ ಮಾಡಲು ಶುರು ಮಾಡುತ್ತಾರೆ.
3.ಪ್ಲೇನ್ ಕುರ್ತಾ ಜೊತೆಗೆ ಕಾಂಟ್ರಾಸ್ಟ್ ಲೆಗ್ಗಿಂಗ್ಸ್ ಮ್ಯಾಚ್ ಮಾಡಿದ್ದರೆ, ೨-೩ ಬ್ರೇಸ್‌ಲೆಟ್ ಇರುವ ರೆಟ್ರೋ ವಾಚ್‌ಗಳು ಟ್ರೆಂಡಿ ಲುಕ್ ಕೊಡುತ್ತವೆ.        4. ಗೋಲ್ಡ್ ಆ್ಯಂಡ್ ಸಿಲ್ವರ್ ಕಲರ್ ಜೊತೆ ಒಂದು ಸಾರಿ ಟ್ರೈ ಮಾಡಿ ನೋಡಿ. ಕ್ಯಾಶುಯಲ್ ಆ್ಯಂಡ್ ಕಂಫರ್ಟಬಲ್ ಎನಿಸುತ್ತದೆ.
ಕ್ಯಾಶುಯಲ್ ಡಿನ್ನರ್ ಅವಧಿಯಲ್ಲಿ ಬ್ರೀಸಿ, ಫನ್ ಲುಕ್‌ಗೆ ಕ್ರೋಷೇ ಟಾಪ್, ಡಿಸ್‌ಟ್ರೆಸ್ಟ್ ಜೀನ್ಸ್ ಜೊತೆ ಲೆದರ್ ರೆಟ್ರೋ ವಾಚ್ ಧರಿಸಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net