

ಮೂಲ್ಕಿ: ಎಳೆಯ ಪ್ರಾಯದಲ್ಲಿ ಸಾವಯವ ಕೃಷಿ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ಬೆಳೆಸಿದಲ್ಲಿ ಮುಂದೆ ಬೆಳೆದಾಗ ಅವರಲ್ಲಿ ಉತ್ತಮ ಕೃಷಿ ಜ್ಞಾನ ಲಭ್ಯವಾಗುತ್ತದೆ ಎಂದು ಕೃಷಿಕ ತಾರಾನಾಥ್ ಹೇಳಿದರು.
ಮೂಲ್ಕಿ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೃಷಿ ಜ್ಞಾನವರ್ಧನೆ ಉದ್ದೇಶದಿಂದ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದಡಿ ಕೃಷಿಭೂಮಿಗೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೈಡ್ ಕ್ಯಾಪ್ಟನ್ ಸಾವಿತ್ರಿ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳು ಸ್ಥಳೀಯ ಕೃಷಿಕ ತಾರಾನಾಥ್ ಅವರ ಕೃಷಿಭೂಮಿಗೆ ಭೇಟಿ ನೀಡಿದ್ದು, ನೇಜಿ ಕೃಷಿಯ ಪ್ರಕ್ರಿಯೆ, ಉಪಯೋಗಗಳು ಮತ್ತು ನೆಡುವ ವಿಧಾನಗಳ ಕುರಿತು ಮಾಹಿತಿ ಪಡೆದು ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಶಾಲಾ ಆಡಳಿತಾಧಿಕಾರಿ ಮಂಜುಳಾ ಕೆ.ವಿ, ಅಧ್ಯಾಪಕರಾದ ಲೋಲಾಕ್ಷಿ ಪಿ.ಸಾಲ್ಯಾನ್ ಮತ್ತು ಪೃಥ್ವಿರಾಜ್ ಉಪಸ್ಥಿತರಿದ್ದರು.