

ಈರೋಡ್: ಈ ಹೈನುಗಾರರು ನೋಡನೋಡುತ್ತಿದ್ದಂತೆಯೇ ರಸ್ತೆಯ ಮೇಲೆ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ಏನು ಎಂದು ನೋಡಿದರೆ ಉತ್ಪಾದಿಸಿದ ಹಾಲಿಗೆ ತಕ್ಕಂತೆ ಬೆಲೆ ಸಿಗುತ್ತಿಲ್ಲ ಎನ್ನುವುದು ಈ ಹೈನುಗಾರರ ಆಕ್ರೋಶ.
ಅಂದ ಹಾಗೆ ಈ ಘಟನೆ ನಡೆದದ್ದು ತಮಿಳುನಾಡಿನ ಈರೋಡ್‌ನಲ್ಲಿ. ಹಾಲನ್ನು ಅಮೃತ ಎಂದು ಭಾವಿಸುವ ನಾಡಿನಲ್ಲಿ ಅದೇ ಹಾಲನ್ನು ರಸ್ತೆಗೆ ಸುರಿಯುವ ಪರಿಸ್ಥಿತಿ ಹೈನುಗಾರರಿಗೆ ಎದುರಾಗಿದೆ ಎಂದರೆ ಅದು ಶೋಚನೀಯ. ಹೈನುಗಾರರು ತಮಿಳುನಾಡು ಸರ್ಕಾರದ ವಿರುದ್ಧ ಇಂದು (ಶುಕ್ರವಾರ) ಈರೋಡ್‌ನಲ್ಲಿ ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು. ತಮಿಳುನಾಡಿನಾದ್ಯಂತ ಹೈನುಗಾರರು ಹಾಲು ಉತ್ಪಾದನಾ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಯ ಈ ವಿಡಿಯೋ ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಸಾವಯುವ ಕೃಷಿಗೆ ಮೊದಲು ರೈತರು ತಯಾರಾಗಲಿ
ಹಾಲಿನ ದರವನ್ನು ಲೀಟರ್‌ಗೆ ಏಳು ರೂಪಾಯಿಯಂತೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಗುರುವಾರ, ಸರ್ಕಾರಿ ಸ್ವಾಮ್ಯದ ಉದ್ಯಮ ಆವಿನ್ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಖರೀದಿ ಬೆಲೆಯನ್ನು ಹೆಚ್ಚಿಸದಿದ್ದರೆ ಪೂರೈಕೆಯನ್ನು ಹಿಂಪಡೆಯುವುದಾಗಿ ಉದ್ಯಮ ಬೆದರಿಕೆ ಹಾಕಿದೆ.
"ನಾವು ಇದನ್ನು ಈಗಾಗಲೇ ಸರ್ಕಾರಕ್ಕೆ ನಮ್ಮ ಜ್ಞಾಪಕ ಪತ್ರದ ಮೂಲಕ ಪ್ರತಿಭಟನೆ, ಮತ್ತು ನಮ್ಮ ಬೇಡಿಕೆ ಬಗ್ಗೆ ತಿಳಿಸಿದ್ದೇವೆ. ಹೊಸ ಬೆಲೆ ಜಾರಿಗೆ ಬಂದರೆ, ಬೆಲೆಗಳು ಕ್ರಮವಾಗಿ 42 ಮತ್ತು 51 ರೂಪಾಯಿಗಳಿಗೆ ತಲುಪುತ್ತವೆ" ಎಂದು ರಾಜೇಂದ್ರನ್ ಮಾಹಿತಿ ನೀಡಿದ್ದಾರೆ. ಟಿಎನ್‌ಎಂಪಿಡಬ್ಲ್ಯುಎ ಅಧ್ಯಕ್ಷರ ಪ್ರಕಾರ, ಖಾಸಗಿ ಸಂಸ್ಥೆಗಳು ಲೀಟರ್‌ಗೆ 45 ರಿಂದ 47 ರೂ.ಗೆ ಹಾಲು ಖರೀದಿಸಿವೆ. (ಏಜೆನ್ಸೀಸ್)