

ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಮಹಿಳೆಯೊಬ್ಬರು ರೋಟರ್ ಟ್ರ್ಯಾಕ್ಟರ್ಗೆ ಬಲಿಯಾದ ಘಟನೆ ಬೆನ್ನಿಗೇ ಇಂದು ಮತ್ತೊಂದು ಅಂಥದ್ದೇ ದುರಂತ ಸಂಭವಿಸಿದ್ದು, ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಅವಘಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಾಮಗಾನಹಳ್ಳಿ ನಿವಾಸಿ ಟ್ರ್ಯಾಕ್ಟರ್ ಚಾಲಕ ದೊಡ್ಡನರಸಿಂಹಯ್ಯ (45) ಸಾವಿಗೀಡಾಗಿದ್ದಾರೆ. ಈ ಅವಘಡ ನಿನ್ನೆ ತಡರಾತ್ರಿ ಸಂಭವಿಸಿದ್ದು, ಈ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಇವರು ನಿನ್ನೆ ರಾತ್ರಿ ಉಳುಮೆಗೆಂದು ರೋಟರ್ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದರು. ಈ ವೇಳೆ ಅವರು ಟ್ರ್ಯಾಕ್ಟರ್ನಿಂದ ಜಾರಿ ಬಿದ್ದಿದ್ದು, ಅದರ ಬ್ಲೇಡ್ಗಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟ್ರ್ಯಾಕ್ಟರ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.