ಎಂ.ಬಿ. ಪಾಟೀಲ್ ಸಿಎಂ ಆಗಲಿ ಅಂತ ಶಬರಿಮಲೆವರೆಗೆ ಪಾದಯಾತ್ರೆ ಹೊರಟ 'ರಾಜಕುಮಾರ'…!

WhatsApp Image 2022-12-13 at 5.36.41 PM
Published on

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಮುಖ್ಯಮಂತ್ರಿಯಾಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ರೈತನೋರ್ವ ಶಬರಿಮಲೆಗೆ ಏಕಾಂಗಿಯಾಗಿ ಪಾದಾಯಾತ್ರೆ ಬೆಳೆಸಿದ್ದಾರೆ.

ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ ಪಾದಯಾತ್ರೆ ಕೈಗೊಂಡಿದ್ದಾರೆ. ಕೊರಳಲ್ಲಿ ಎಂ.ಬಿ. ಪಾಟೀಲರ ಭಾವಚಿತ್ರ ಕಟ್ಟಿಕೊಂಡು ತಲೆ ಮೇಲೆ ಇರುಮುಡಿ ಹೊತ್ತು ರಾಜಕುಮಾರ ಪಾದಯಾತ್ರೆ ಕೈಗೊಂಡಿದ್ದಾರೆ.

ಒಟ್ಟು 5.5 ಎಕರೆ ಹೊಲ ಹೊಂದಿರುವ ಈ ರೈತ ದ್ರಾಕ್ಷಿ ಬೆಳೆಗಾರರಾಗಿದ್ದಾರೆ. ತಮ್ಮ ಭಾಗ ಈಗ ನೀರಾವರಿಯಾಗಿದ್ದು, ಇದಕ್ಕೆಲ್ಲ ಕಾರಣರಾದ ಎಂ. ಬಿ. ಪಾಟೀಲರು ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ, ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತಿದ್ದಾಗಿ ತಿಳಿಸಿದ್ದಾರೆ.

ಡಿ. 6 ರಿಂದ ಬಾಬಾನಗರದಿಂದ ಪಾದಯಾತ್ರೆ ಆರಂಭಿಸಿದ್ದು, ಈಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಾಟಿ ಪಾದಯಾತ್ರೆ ಮುಂದವರೆಸಿದ್ದಾರೆ. ಪ್ರತಿದಿನ ಸುಮಾರು 40 ಕಿಮೀ ಪಾದಯಾತ್ರೆ ನಡೆಸುತ್ತಿದ್ದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಎಂ.ಬಿ. ಪಾಟೀಲರ ಭಾವಚಿತ್ರಕ್ಕೆ ಪೂಜೆ ಮಾಡುವುದಾಗಿ ರಾಜಕುಮಾರ ತಿಳಿಸಿದ್ದಾರೆ. ಸುಮಾರು 1300 ಕಿಮೀ. ಪಾದಯಾತ್ರೆ ಇದಾಗಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನದ ಬಳಿಕ ಬಾಬಾನಗರಕ್ಕೆ ಮರಳಿ ಕೃಷಿಯಲ್ಲಿ ತೊಡಗುವುದಾಗಿ ರಾಜಕುಮಾರ ರವೀಂದ್ರ ಹೊನವಾಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net