ಡಿಕೆಶಿಗೆ ರೈತನ ಸವಾಲ್! ಮೋದಿ ದೇಶದ ಪ್ರಧಾನಿ ಆಗದಿದ್ರೆ, ನಿಮ್ಮ ಚಪ್ಪಲಿ ನನ್ನ ತಲೆಮೇಲಿಟ್ಟು ಇಡೀ…

WhatsApp Image 2024-04-12 at 11.55.24 AM
Published on

ಬಾಗಲಕೋಟೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ಗೆ ರೈತನೊಬ್ಬ ನೇರ ಸವಾಲ್ ಎಸೆದಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆದ್ದು, ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸದೆ ಹೋದರೆ ನಿಮ್ಮ ಪಾದರಕ್ಷೆಗಳನ್ನು ನನ್ನ ತಲೆಮೇಲೆ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಡಿಕೆಶಿಗೆ ಚಾಲೆಂಜ್ ಹಾಕಿದ ಅಂಕಲಗಿ ಗ್ರಾಮದ ರೈತ ಲಚ್ಚಪ್ಪ ಹೊಸಮನಿ, ನಾನೊಬ್ಬ ಮೋದಿ ಅಭಿಮಾನಿ, ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್​ನವರು, ಡಿ.ಕೆ. ಶಿವಕುಮಾರ್​ ಏನೆಲ್ಲ‌ ಮಾತಾಡ್ತಾರೆ. ದೇಶದ 140 ಕೋಟಿ ಜನ‌ ಮೋದಿಯ ಪರಿವಾರ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿ ಆಗದಿದ್ದರೆ, ನಿಮ್ಮ ಚಪ್ಪಲಿ ನನ್ನ ತಲೆಮೇಲೆ ಇಟ್ಟುಕೊಂಡು ಇಡೀ

ಕನಕಪುರ ಕ್ಷೇತ್ರದಲ್ಲಿ ಅಡ್ಡಾಡುತ್ತೇನೆ ಎಂದಿದ್ದಾರೆ.

ಸೋತರೆ ನಾನು ಹಾಗೇ ಮಾಡ್ತೀನಿ. ಮೋದಿ ಪ್ರಧಾನಿಯಾದರೆ ನೀವೇನು ಮಾಡುತ್ತೀರಿ? ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾರೆ.

ಕಲಾದಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ರೈತ ಹಾಕಿದ ಸವಾಲಿಗೆ ಸುತ್ತಲ್ಲಿದ್ದ ಮೋದಿ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net