ಸಿರಿಬಾಗಿಲು ಶಾಲಾ ಮುಖ್ಯಶಿಕ್ಷಕಗೆ ಬೀಳ್ಕೊಡುಗೆ

9
Published on

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕೊಂಬಾರು ಗ್ರಾಮದ ಸಿರಿಬಾಗಿಲು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ವಿಜಯಕುಮಾರ ನಡುತೋಟ ಅವರಿಗೆ ಬೀಳ್ಕೊಡುಗೆ ಸಮಾರಂಭ ಸೋಮವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಿರಿಬಾಗಿಲು ಶಾಲಾ ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ, ಅಂಗನವಾಡಿ ಕೇಂದ್ರ, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿಗಳು, ವಿಜಯಕುಮಾರ್ ಅವರ ಅಭಿಮಾನಿಗಳು, ಶಿಕ್ಷಕ ಬಂಧುಗಳು, ವಿವಿಧ ಸಂಘ ಸಂಸ್ಥೆಗಳು, ಕುಟುಂಬದವರು, ಬಂಧು ಮಿತ್ರರು ನಿವೃತ್ತರನ್ನು ಸನ್ಮಾನಿಸಿದರು.

ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಸೂದನ ಓಡೋಳಿ ಉದ್ಘಾಟಿಸಿದರು. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡುತೋಟ, ಕೊಂಬಾರು ಗ್ರಾಪಂನ ಮಾಜಿ ಅಧ್ಯಕ್ಷರುಗಳಾದ ಪ್ರಸನ್ನಕುಮಾರ ಕುಮಾರಪುರ, ಜಯಶ್ರೀ ರಾಮಚಂದ್ರ ದೇರಣೆ ಮುಖ್ಯಅತಿಥಿಗಳಾಗಿದ್ದರು.ಬೆಳ್ಳಾರೆ ಪಬ್ಲಿಕ್ ಸ್ಕೂಲ್ ಮುಖ್ಯಶಿಕ್ಷಕ ಮಾಯಿಲಪ್ಪ, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಅಂಗನವಾಡಿ ಶಿಕ್ಷಕಿ ವನಜಾಕ್ಷಿ, ಸಿರಿಬಾಗಿಲು ಶಾಲಾ ಪೂರ್ವ ಶಿಕ್ಷಕ ದಿನೇಶ್, ಶಿಕ್ಷಕಿ ಲಿಖಿತ ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಅಪೂರ್ವ ನಿರೂಪಿಸಿದರು. ಶಿಕ್ಷಕಿ ವೀಣಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net