

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನಲ್ಲಿ 16 ವರ್ಷಗಳ ಸೇವೆಯಿಂದ ನಿವೃತ್ತಿ ಹೊಂದಿದ ಸ್ವಚ್ಛತಾ ಸಿಬ್ಬಂದಿ ರೇವತಿ ಅವರಿಗೆ ಕಾಲೇಜಿನ ಬೋಧಕೇತರ ಸಿಬ್ಬಂದಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಮಾತನಾಡಿ, ರೇವತಿ ಅವರು ಕಾಲೇಜಿನ ಸ್ವಚ್ಛತೆ ಕೆಲಸವನ್ನು ಅತ್ಯಂತ ನಿಷ್ಠೆ ಹಾಗೂ ಬದ್ಧತೆಯಿಂದ ನಿರ್ವಹಿಸಿದ್ದಾರೆ ಎಂದರು.
ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ. ಹಾಗೂ ಬೋಧಕೇತರ ಸಿಬ್ಬಂದಿ ನಿವೃತ್ತರಿಗೆ ಶುಭಹಾರೈಸಿದರು. ಕಾಲೇಜಿನ ಕಚೇರಿ ಅಧೀಕ್ಷಕಿ ವಿಜಯಾ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಉಪಸ್ಥಿತರಿದ್ದರು. ಗ್ರಂಥಾಲಯದ ಸಿಬ್ಬಂದಿ ಹರೀಶ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗ ಸಿಬ್ಬಂದಿ ನವೀನ್ ವಂದಿಸಿದರು.