ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ಶಿಕ್ಷಕ : ಎಚ್.ಆರ್.ಈಶ್ವರ್ ಅಭಿಪ್ರಾಯ

New Project (19)
Published on

ಉಳ್ಳಾಲ: ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನಿಜವಾದ ಶಿಕ್ಷಕ, ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳ ನಿರ್ವಾಣ ಶಿಕ್ಷಕರಿಂದಲೇ ಆಗಿರುವುದರಿಂದ ಶಿಕ್ಷಕ ವೃತ್ತಿ ಪವಿತ್ರ ಮತ್ತು ಶ್ರೇಷ್ಠವಾದದ್ದು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಅಧಿಕಾರಿ ಎಚ್.ಆರ್.ಈಶ್ವರ್ ಅಭಿಪ್ರಾಯಪಟ್ಟರು.

ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತರಾದ ಸಿರಿಲ್ ವಿ.ವೇಗಸ್ ಅವರಿಗೆ ಮಂಗಳೂರು ದಕ್ಷಿಣ ವಲಯ ಅನುದಾನಿತ ಶಾಲಾ ಕಾಲೇಜು ನೌಕರ ಸಂದ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಅನುದಾನಿತ ಶಾಲಾ ಕಾಲೇಜು ನೌಕರರ ಸಂ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಅಭಿನಂದನಾ ಭಾಷಣದಲ್ಲಿ, ಸಿರಿಲ್ ವೇಗಸ್ ಒಬ್ಬ ಅಸಾಧಾರಣ ಶಿಕ್ಷಕ ವಾರ್ಗದರ್ಶಕರಾಗಿದ್ದರು. ತಮ್ಮ ಜೀವನದಲ್ಲಿ ನೇರ ನಡೆನುಡಿ ವ್ಯಕ್ತಿತ್ವದವರು. ಸುವಾರು 35 ವರ್ಷ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಿ ಎಲ್ಲರಿಗೂ ವಾದರಿಯಾಗಿದ್ದರು ಎಂದರು.

ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಫಿಲೋಮಿನಾ ಸಿಕ್ವೇರಾ, ಸಂದ ಉಪಾಧ್ಯಕ್ಷ ಗುರುಮೂರ್ತಿ, ಚಿತ್ರಕಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್ ತುಂಬೆ, ಪ್ರಭಾರ ಮುಖ್ಯಶಿಕ್ಷಕಿ ಅನ್ಸಿಟ ಡಿಸೋಜ, ಪದಾಧಿಕಾರಿಗಳಾದ ಗಣೇಶ್, ಶ್ರೀನಿವಾಸ ಶೆಣೈ, ಅನಿಲ್ ಡಿಸೋಜ, ವೆಂಕಟರಮಣ ಭಟ್, ಲಲಿತಾ, ಸೌಮ್ಯಾ, ಆಸ್ಟಿನ್ ಮೊಂತೆರೋ, ಭವ್ಯಾ ಫ್ರಾನ್ಸಿಸ್ ಕ್ರಾಸ್ತ, ಬಬಿತಾ ಮೋಹನ್ ಹರೇಕಳ ಮೊದಲಾದವರಿದ್ದರು.

ಜತೆ ಕಾರ್ಯದರ್ಶಿ ಸುನಿತಾ ಡಿಸೋಜ ನಿರೂಪಿಸಿದರು. ಸಂಟನಾ ಕಾರ್ಯದರ್ಶಿ ಮೊಹಮ್ಮದ್ ಫಾಸಿಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net