

ಮುಂಬೈ: ವೇಗಿ ಮೊಹಮದ್ ಶಮಿ ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಗುಜರಾತ್ ಗೆಲುವಿನ ರೂವಾರಿಯಾಗಿದ್ದರು. ಇದರ ಬೆನ್ನಲ್ಲೇ ಶಮಿ ಬೌಲಿಂಗ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಬಂದಿತ್ತು. ಈ ಪೈಕಿ ಅಮೆರಿಕದ ನೀಲಿಚಿತ್ರಗಳ ನಟಿ ಕೆಂಡ್ರ ಲಸ್ಟ್ ಅವರಿಂದಲೂ ಶಮಿಗೆ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತವಾಗಿರುವುದು ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದೆ. ಇದರ ಬೆನ್ನಲ್ಲೇ ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೋಲ್‌ಗಳಿಗೂ ಒಳಗಾಗಿದ್ದಾರೆ.
‘ಅತ್ಯಂತ ಶ್ರೇಷ್ಠ ನಿರ್ವಹಣೆ ಮೊಹಮದ್ ಶಮಿ’ ಎಂದು ಕೆಂಡ್ರ ಲಸ್ಟ್ ಟ್ವೀಟಿಸಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು ವಿವಿಧ ಮೀಮ್ಸ್ ಮೂಲಕ ಶಮಿ ಕಾಲೆಳೆದಿದ್ದಾರೆ. ಜತೆಗೆ ಕೆಂಡ್ರ ಲಸ್ಟ್‌ಗೆ ಕ್ರಿಕೆಟ್ ಮತ್ತು ಐಪಿಎಲ್ ಬಗೆಗೆ ಇರುವ ಆಸಕ್ತಿಯ ಬಗ್ಗೆಯೂ ಅಚ್ಚರಿ ವ್ಯಕ್ತವಾಗಿದೆ.
ಕೆಂಡ್ರ ಲಸ್ಟ್ ಈಗ ಶಮಿ ಅವರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೂ ಅನೇಕರು ಕಾಮೆಂಟ್ ಹಾಕಿದ್ದಾರೆ. 43 ವರ್ಷದ ಕೆಂಡ್ರಾ ಲಸ್ಟ್ ಕೋಲ್ಕತ ನೈಟ್‌ರೈಡರ್ಸ್ ತಂಡದ ಅಭಿಮಾನಿಯೂ ಆಗಿದ್ದಾರೆ. ಕೆಕೆಆರ್ ಲಾಂಛನದ ಟೀ-ಶರ್ಟ್ ಧರಿಸಿದ ಚಿತ್ರಗಳನ್ನೂ ಪ್ರಕಟಿಸಿ ಗಮನಸೆಳೆದಿದ್ದಾರೆ.