ಕೌಟುಂಬಿಕ ಕಲಹ: ಪತಿಯ ಕಿವಿ ಕಚ್ಚಿ, ಆಯುಧದಿಂದ ಹಲ್ಲೆ ನಡೆಸಿದ ಪತ್ನಿ! | Family Dispute

Untitled design - 2025-09-24T231359.593
Published on

Family Dispute: ಮನೆಯಲ್ಲಿ ನಡೆದ ಜಗಳದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಕಿವಿಯನ್ನು ಕಚ್ಚಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೋಮವಾರ(ಸೆ.22) ನಡೆದಿದೆ.

ಅಮಿತ್ ಸೋಂಕರ್ ಎಂದು ಗುರುತಿಸಲಾದ ವ್ಯಕ್ತಿಗೆ ಪತ್ನಿ ಸಾರಿಕಾ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಕಿವಿಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡ ಅಮಿತ್ ಸೋಂಕರ್, ತನ್ನ ಹೆಂಡತಿ ಮೊದಲು ತನ್ನನ್ನು ಹೊಡೆದು ನಂತರ ತನ್ನ ಬಲ ಕಿವಿಯನ್ನು ಕಚ್ಚಿದ್ದಾಳೆ. ಆಕೆ ನನ್ನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ ಎಂದೂ ಅವರು ಆರೋಪಿಸಿದ್ದಾರೆ.

"ಅವಳು ನನ್ನೊಂದಿಗೆ(ಈಗಾಗಲೇ ವಿಚ್ಛೇದನವಾಗಿದೆ) ವಾಸಿಸಲು ಇಷ್ಟ ಇಲ್ಲ. ಹೀಗಾಗಿ, ಹಣ ಮತ್ತು ಮನೆ ಸಿಕ್ಕ ನಂತರ ಅವಳನ್ನು ಬಿಟ್ಟು ಹೋಗುವಂತೆ ಅವಳು ನನ್ನ ಮೇಲೆ ಒತ್ತಡ ಹೇರುತ್ತಿದ್ದಾಳೆ" ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಸಾರಿಕಾ ಜಗಳವಾಡಲು ಪ್ರಾರಂಭಿಸಿದಾಗ ಅಮಿತ್ ಸೋಂಕರ್ ಸೋಫಾದ ಮೇಲೆ ಮಲಗಿದ್ದರು ಮತ್ತು ನಂತರ ಅವರ ಮೇಲೆ ಹಲ್ಲೆ ನಡೆಸಿದರು.

ಇದಕ್ಕೆ ಪ್ರತಿಯಾಗಿ ಸಾರಿಕಾ, ತನ್ನ ಪತಿಯ ವಿರುದ್ಧ ಹಿಂಸೆಯ ಆರೋಪ ಹೊರಿಸಿ ಪ್ರತಿ ದೂರು ದಾಖಲಿಸಿದರು. ಪೊಲೀಸರು ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net