ಬಾಳೆಹೊನ್ನೂರು: ಶ್ರೀಜಗದ್ಗುರು ರಂಭಾಪುರಿ ಪೀಠದಲ್ಲಿ ಪ್ರತಿವರ್ಷದಂತೆ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಶ್ರೀವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಸೋಮವಾರದಿಂದ 5 ದಿನಗಳ ಕಾಲ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸೋಮವಾರ ದ್ವಜಾರೋಹಣ, ಹರಿದ್ರಾಲೇಪನದೊಂದಿಗೆ ಆರಂಭವಾಗುವ ಜಾತ್ರೆಯಲ್ಲಿ ವೀರಗಾಸೆ–ಪುರವಂತರ ಸಮಾವೇಶ ನಡೆಯಲಿದೆ. ಮಾ.11ರಂದು ದೀಪೋತ್ಸವ, ಕುಂಕುಮೋತ್ಸವ, ವೀರಭದ್ರಸ್ವಾಮಿ ಚಿಕ್ಕರಥೋತ್ಸವ, ಕೃಷಿ ಸಮ್ಮೇಳನ ನಡೆಯಲಿದೆ.
ಮಾ.12ರಂದು ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಖ್ಯಾತ ಕೃಷಿ ತಜ್ಞೆ ಡಾ.ಕವಿತಾ ಮಿಶ್ರಾ ಅವರನ್ನು 2025ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದು, ಅಭಾವೀಮ ಅಧ್ಯಕ್ಷ ಶಂಕರ ಬಿದರಿ ಸೇರಿದಂತೆ ವಿವಿಧ ಮುಖಂಡರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಮಾ.13ರಂದು ಶಯನೋತ್ಸವ, ಕೆಂಡಾರ್ಚನೆ, ಶಿವಾನಂದ ಎಸ್ಟೇಟ್‌ನಲ್ಲಿ ಜಗದ್ಗುರುಗಳ ಪೂಜೆ, ಪ್ರಸದಾ ವಿತರಣೆಯಾಗಲಿದೆ. ಮಾ.14ರಂದು ವಸಂತೋತ್ಸವ, ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಮೇ 02ಕ್ಕೆ ಕೇದಾರನಾಥ ಓಪನ್; ಪ್ರಧಾನ ಅರ್ಚಕರಾಗಿ ಕನ್ನಡಿಗ ವಾಗೀಶಲಿಂಗ ನೇಮಕ