ಬಂಟಕಲ್ಲು ಕಾಲೇಜಿನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

blm (3)
Published on

ಶಿರ್ವ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಬೆಂಗಳೂರಿನ ಕೋರೆಲ್ ಟೆಕ್ನಾಲಜೀಸ್, ಕಾಲೇಜಿನ ಐಎಸ್‌ಟಿಇ ಟಕ ಮತ್ತು ಐಇಇಇ ಟಕ ಸಹಯೋಗದೊಂದಿಗೆ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಿತ್ತು.

ಎಐ ವ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್‌ವೇರ್ ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು. ಕೋರೆಲ್ ಟೆಕ್ನಾಲಜೀಸ್‌ನ ಹಿರಿಯ ಇಂಜಿನಿಯರ್ ರಕ್ಷಿತ್ ಬಿ.ಎಸ್. ಉದ್ಘಾಟಿಸಿದರು. ಸಂಸ್ಥೆ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ವಾತನಾಡಿ, ಇಂತಹ ಕಾರ್ಯಾಗಾರಗಳು ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಸಾಮರ್ಥ್ಯ ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಎಂದರು. ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯಾ ಜೆ. ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಸದಾನಂದ ಎಲ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net