

ಬೆಂಗಳೂರು: ಕೆಲವು ದಿನಗಳಿಂದ ವಾಟ್ಸ್ಆ್ಯಪ್ನಲ್ಲಿ ಎಳನೀರು ಕುಡಿದು ಕ್ಯಾನ್ಸರ್ ಗುಣಪಡಿಸಬಹುದು ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದೇಶದಲ್ಲಿ ಎಳನೀರನ್ನು ಬಿಸಿ ಮಾಡಿ ಕುಡಿದರೆ ಅದು ಕ್ಯಾನ್ಸರ್ಗೆ ರಾಮಬಾಣ ಎಂದು ಬರೆದು ಜನರ ದಿಕ್ಕು ತಪ್ಪಿಸುತ್ತಿದೆ.
ಈ ಬಗ್ಗೆ ಟಾಟಾ ಮೆಮೊರಿಯಲ್ ಆಸ್ಪತ್ರೆ ಪತ್ರಿಕಾಗೋಷ್ಟಿ ಮೂಲಕ ಪ್ರತಿಕ್ರಿಯೆ ನೀಡಿದ್ದು ಪತ್ರದಲ್ಲಿ ಈ ಸುದ್ದಿ ಸುಳ್ಳು. ಟಾಟಾ ಮೆಮೊರಿಯಲ್ ಆಸ್ಪತ್ರೆ ಅಥವಾ ಡಾ|ರಾಜೇಂದ್ರ ಈ ವಿಧಾನವನ್ನು ಒಪ್ಪುವುದಿಲ್ಲ. ಅದಲ್ಲದೇ ಬಿಸಿ ಎಳನೀರು ಕುಡಿದರೆ ಯಾವುದೇ ರೀತಿಯ ಕ್ಯಾನ್ಸರ್ ಗುಣಪಡಿಸಬಹುದು ಎನ್ನುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಇದ್ದು ಸುಳ್ಳು ಸುದ್ದಿ. ಜನರು ಇಂತಹ ಸುದ್ದಿಗಳನ್ನು ನಂಬಬಾರದು ಎಂದು ಸ್ಪಷ್ಟನೆ ನೀಡಿದೆ. (ಏಜೆನ್ಸೀಸ್)